ಪತಿಯನ್ನು ಕೊಲ್ಲಲು ಪತ್ನಿ ಹೂಡಿದ ಸಂಚು ಏನೆಂದು ತಿಳಿದರೆ ಶಾಕ್ ಆಗ್ತೀರಾ

ಮಹಾರಾಷ್ಟ್ರ| pavithra| Last Modified ಗುರುವಾರ, 28 ಫೆಬ್ರವರಿ 2019 (06:59 IST)
: ಪತ್ನಿಯೊಬ್ಬಳು ಪತಿಯ ಖಾಸಗಿ ಅಂಗಕ್ಕೆ ವಿಷಕಾರಿ ಲೋಷನ್ ಹಚ್ಚಿ ಕೊಲ್ಲಲು ಯತ್ನಿಸಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.


ಪತ್ನಿಯೊಬ್ಬಳು ರಜೆ ಮೇಲೆ ಊರಿಗೆ ಬಂದಿದ್ದ ಪತಿಯ ಜೊತೆ ಸಂಬಂಧ ಬೆಳೆಸುವ ನೆಪದಲ್ಲಿ ಖಾಸಗಿ ಅಂಗಕ್ಕೆ ವಿಷಕಾರಿ ಲೋಷನ್ ಹಚ್ಚಿದ್ದಾಳೆ. ಈ ಲೋಷನ್ ಸಂಬಂಧ ಬೆಳೆಸಲು ನೆರವಾಗುತ್ತದೆ ಎಂದು ಕಾರಣ ನೀಡಿದ್ದಾಳೆ. ಇದನ್ನು ನಂಬಿದ ಪತಿ ಆಕೆಯಿಂದ ಲೋಷನ್ ಹಚ್ಚಿಕೊಳ್ಳುತ್ತಿದ್ದನಂತೆ. ಆಕೆಯ ಈ ನೀಚ ಕೃತ್ಯಕ್ಕೆ ಆಕೆಯ ಬಾಯ್ ಫ್ರೆಂಡ್ ಕೂಡ ನೆರವಾಗಿದ್ದಾನೆ.


ಆದರೆ ಇತ್ತೀಚಿಗೆ ಆತನ ಖಾಸಗಿ ಅಂಗದಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತಿದ್ದ ಹಿನ್ನಲೆಯಲ್ಲಿ ವೈದ್ಯರ ಬಳಿ ತೋರಿಸಿದಾಗ, ವೈದ್ಯರು ಲೋಷನ್ ವಿಷಕಾರಿ ಪದಾರ್ಥಗಳಿಂದ ತಯಾರಿಸಲಾಗಿದ್ದು, ಮಾರಣಾಂತಿಕ ಕಾಯಿಲೆಗೆ ದಾರಿ ಮಾಡಬಹುದು ಎಂದು ತಿಳಿಸಿದ್ದಾರೆ.


ತನ್ನನ್ನು ಕೊಲ್ಲಲು ಪತ್ನಿ ಸಂಚು ಮಾಡಿದ್ದಾಳೆ ಎಂದು ತಿಳಿದ ಪತಿ, ಪತ್ನಿ ಹಾಗೂ ಆಕೆಗೆ ನೆರವಾದ ಆಕೆಯ ಬಾಯ್ ಫ್ರೆಂಡ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಪತ್ತೆಯಾದ ಪತ್ನಿ ಹಾಗೂ ಆಕೆಯ ಬಾಯ್ ಫ್ರೆಂಡ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್


ಇದರಲ್ಲಿ ಇನ್ನಷ್ಟು ಓದಿ :