ಗುಜರಾತ್ ಸಿಎಂ ಗದ್ದುಗೆ ಕರ್ನಾಟಕ ರಾಜ್ಯಪಾಲ ವಜುಬಾಯಿ ಪಾಲಾಗುತ್ತಾ?!

ನವದೆಹಲಿ| Krishnaveni| Last Modified ಮಂಗಳವಾರ, 19 ಡಿಸೆಂಬರ್ 2017 (11:08 IST)
ನವದೆಹಲಿ: ಗುಜರಾತ್ ಚುನಾವಣೆಯಲ್ಲಿ ಬಹುಮತ ಗಳಿಸಿರುವ ಬಿಜೆಪಿ ಮತ್ತೊಮ್ಮೆ ಸರ್ಕಾರ ರಚಿಸಲು ಮುಂದಾಗಿದೆ. ಆದರೆ ಸಿಎಂ ಸ್ಥಾನಕ್ಕೆ ಶಕ್ತ ನಾಯಕನ ಹುಡುಕಾಟದಲ್ಲಿದ್ದು, ಕರ್ನಾಟಕ ರಾಜ್ಯಪಾಲ ವಜುಬಾಯಿ ವಾಲಾ ಹೆಸರು ಮುಂಚೂಣಿಯಲ್ಲಿದೆ.

ಗುಜರಾತ್ ಚುನಾವಣೆ ಫಲಿತಾಂಶಕ್ಕೆ ಮೊದಲೂ ವಜುಬಾಯಿ ಹೆಸರು ಕೇಳಿಬಂದಿತ್ತು. ಪ್ರಧಾನಿ ಮೋದಿಗೆ ವಜುಬಾಯಿ ಅವರ ಮೇಲೆ ಹೆಚ್ಚಿನ ಒಲವಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಕರ್ನಾಟಕದಲ್ಲಿ ಬಾಕಿಯಿರುವ ಕಡತಗಳನ್ನು ಶೀಘ್ರ ವಿಲೇವಾರಿ ಮಾಡಲು ಸೂಚಿಸಿದ್ದರು ಎನ್ನಲಾಗಿತ್ತು.ಇದೀಗ ಸಿಎಂ ಪಟ್ಟಕ್ಕೆ ಸೂಕ್ತ ವ್ಯಕ್ತಿಯ ಹುಡುಕಾಟದಲ್ಲಿರುವ ಬಿಜೆಪಿ ರಾಷ್ಟ್ರೀಯ ನಾಯಕರು ವಜುಬಾಯಿ ಅವರಿಗೆ ಮಣೆ ಹಾಕುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್


ಇದರಲ್ಲಿ ಇನ್ನಷ್ಟು ಓದಿ :