ಮಡದಿಯ ಮೃತದೇಹವನ್ನು ಸೈಕಲ್ ನಲ್ಲಿ ಹೊತ್ತೊಯ್ದು ವೃದ್ಧ ಪತಿ

ಲಕ್ನೋ| Krishnaveni K| Last Modified ಗುರುವಾರ, 29 ಏಪ್ರಿಲ್ 2021 (10:49 IST)
ಲಕ್ನೋ: ಕೊರೋನಾದಿಂದ ಸಾವನ್ನಪ್ಪಿದ ಪತ್ನಿಯ ಮೃತದೇಹವನ್ನು ಅಂತ್ಯಸಂಸ್ಕಾರ ಮಾಡಲು ಸ್ಥಳೀಯರು ಒಪ್ಪದ ಕಾರಣ 70 ವರ್ಷದ ವೃದ್ಧ ಪತಿ ಮೃತದೇಹವನ್ನು ಸೈಕಲ್ ಮೇಲೆ ಹೊತ್ತೊಯ್ದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
 > ಸ್ಥಳೀಯ ಸರ್ಕಾರಿ ಕೊರೋನಾ ಆಸ್ಪತ್ರೆಯಲ್ಲಿ ಪತ್ನಿ ಮೃತಪಟ್ಟಿದ್ದಳು. ಆಕೆಯ ಮೃತದೇಹವನ್ನು ಸ್ಥಳೀಯ ಸ್ಮಶಾನದಲ್ಲಿ ಶವ ಸಂಸ್ಕಾರ ಮಾಡಲು ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು.>   ಇದರಿಂದಾಗಿ ಬೇರೆ ದಾರಿ ಕಾಣದ ವೃದ್ಧಿ ಪತಿ ಆಕೆಯ ಮೃತದೇಹವನ್ನು ಸೈಕಲ್ ಗೆ ಕಟ್ಟಿ ಇನ್ನೊಂದೆಡೆ ಸಾಗಿಸಲು ಪ್ರಯತ್ನಿಸಿದ್ದಾನೆ. ಈ ವೇಳೆ ಆಯತಪ್ಪಿ ಸೈಕಲ್ ಸಮೇತ ಬಿದ್ದಿದ್ದು, ಇದನ್ನು ಗಮನಸಿದ ಪೊಲೀಸ್ ಪೇದೆಯೊಬ್ಬರು ಸಹಾಯಕ್ಕೆ ಧಾವಿಸಿದ್ದಾರೆ. ಬಳಿಕ ಪೊಲೀಸರ ನೆರವಿನಿಂದ ಮೃತದೇಹವನ್ನು ಅಂತ್ಯ ಸಂಸ್ಕಾರ ಮಾಡಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :