ಕಾಯಬೇಕಾದ ಗಂಡನೇ ಹೆಂಡತಿಗೆ ಇಂಥಾ ದ್ರೋಹ ಮಾಡೋದಾ?!

ನವದೆಹಲಿ| Krishnaveni K| Last Updated: ಶನಿವಾರ, 7 ನವೆಂಬರ್ 2020 (11:23 IST)
ನವದೆಹಲಿ: ತಂದೆಯ ನಂತರ ಒಂದು ಹೆಣ್ಣಿಗೆ ಕೈಹಿಡಿದ ಗಂಡನೇ ರಕ್ಷಕನ ಸ್ಥಾನ ತುಂಬುತ್ತಾನಂತೆ. ಆದರೆ ಇಲ್ಲೊಬ್ಬ ಪಾಪಿ ಪತಿ ತನ್ನ ಪತ್ನಿಯ ಶೀಲವನ್ನೇ ಹರಾಜು ಹಾಕಿ ಹಣಕ್ಕಾಗಿ ಬೆದರಿಕೆ ಹಾಕಿದ ಘಟನೆ ನಡೆದಿದೆ.
 

ಬಾತ್ ರೂಂಗೆ ಸ್ಪೈ ಕ್ಯಾಮರಾ ಫಿಕ್ಸ್ ಮಾಡಿ ಪತ್ನಿಯ ಅಶ್ಲೀಲ ಫೋಟೋಗಳನ್ನು ಸೆರೆಹಿಡಿದಿದ್ದ ಗಂಡ ಅದನ್ನು ಆಕೆಗೆ ತೋರಿಸಿ 20 ಲಕ್ಷ ಹಣ ಕೊಡದೇ ಇದ್ದರೆ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ಬೆದರಿಕೆ ಹಾಕುತ್ತಿದ್ದಾನಂತೆ. ಈಗಾಗಲೇ ಕೆಲವು ಫೋಟೋಗಳನ್ನು ವ್ಯಾಟ್ಸಪ್ ಸ್ಟೇಟಸ್ ನಲ್ಲಿ ಹಾಕಿಕೊಂಡಿದ್ದಾನೆ ಎನ್ನಲಾಗಿದೆ. ಪತ್ನಿ ಈಗ ತವರು ಮನೆಯಲ್ಲಿದ್ದು, ಪತಿಯ ಮೇಲೆ ಪೊಲೀಸರಿಗೆ ದೂರು ನೀಡಿದ್ದಾಳೆ. ಇದೀಗ ಪೊಲೀಸರು ಆತನ ಮೇಲೆ ಎಫ್ಐಆರ್ ದಾಖಲಿಸಿದ್ದು, ಬಂಧನಕ್ಕಾಗಿ ಬಲೆ ಬೀಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :