ಆನ್ ಲೈನ್ ಜೂಜಿನಾಟದಲ್ಲಿ 7 ಲಕ್ಷ ಕಳೆದುಕೊಂಡ ವ್ಯಕ್ತಿ ಮಾಡಿದ್ದೇನು ಗೊತ್ತಾ?

ಚೆನ್ನೈ| Krishnaveni K| Last Modified ಸೋಮವಾರ, 11 ಜನವರಿ 2021 (09:32 IST)
ಚೆನ್ನೈ: ಆನ್ ಲೈನ್ ಜೂಜಿನಾಟ ಎಷ್ಟೋ ಸಂಸಾರಗಳನ್ನು ಹಾಳು ಮಾಡುತ್ತಿವೆ ಎಂಬ ಆಪಾದನೆಗಳ ಬೆನ್ನಲ್ಲೇ ತಮಿಳುನಾಡಿನಲ್ಲಿ ವ್ಯಕ್ತಿಯೊಬ್ಬ ಜೂಜಾಟದಲ್ಲಿ 7 ಲಕ್ಷ ರೂ. ಕಳೆದುಕೊಂಡು ಜೀವವನ್ನೇ ಕಳೆದುಕೊಂಡಿದ್ದಾನೆ.

 
ಖಾಸಗಿಯ ಕಂಪನಿಯ ನೌಕರನಾಗಿದ್ದ ವ್ಯಕ್ತಿ ಮನೆಯಿಂದ ನಾಪತ್ತೆಯಾಗಿದ್ದ.  ಈ ಬಗ್ಗೆ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರಿಗೆ ತಿರುಪುರ ಬಳಿ ರೈಲ್ವೇ ಹಳಿಯಲ್ಲಿ ಆತನ ಛಿದ್ರಗೊಂಡ ದೇಹ ಸಿಕ್ಕಿದೆ. ಪ್ರಾಥಮಿಕ ತನಿಖೆಗಳಿಂದ ಆತ ಆನ್ ಲೈನ್ ಜೂಜಾಟದಲ್ಲಿ 7 ಲಕ್ಷ ಕಳೆದುಕೊಂಡ ಮಾಹಿತಿ ಸಿಕ್ಕಿದೆ. ಇದೇ ಕಾರಣಕ್ಕೆ ಆತ ಸ್ವಯಂ ಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :