ಕೋಟ್ಯಧಿಪತಿಯ ಹೆಂಡತಿ ಆಟೋ ಚಾಲಕನೊಂದಿಗೆ ಪರಾರಿ!

ಮಧ್ಯಪ್ರದೇಶ| Ramya kosira| Last Modified ಗುರುವಾರ, 28 ಅಕ್ಟೋಬರ್ 2021 (09:49 IST)
ಇಂದೋರ್ : ಆಕೆಯ ಗಂಡ ಕೋಟ್ಯಧಿಪತಿ. ಆಕೆಗೆ ಮನೆಯಲ್ಲಿ ಏನೆಲ್ಲ ಬೇಕೋ ಅದೆಲ್ಲವೂ ಇತ್ತು. ಆದರೂ ಆಕೆಗೆ ಆಟೋ ಚಾಲಕನತ್ತ ಸೆಳೆತ.
ಆಟೋ ಚಾಲಕನ ಪ್ರೇಮಪಾಶಕ್ಕೆ ಬಿದ್ದ ಕೋಟ್ಯಧಿಪತಿಯ ಹೆಂಡತಿ ಆತನೊಂದಿಗೆ ಪರಾರಿಯಾಗಿದ್ದಾಳೆ. ಅಷ್ಟೇ ಅಲ್ಲ; ಹೋಗುವಾಗ ಮನೆಯಲ್ಲಿದ್ದ 47 ಲಕ್ಷ ರೂ. ಹಣವನ್ನೂ ತೆಗೆದುಕೊಂಡು ಓಡಿಹೋಗಿದ್ದಾಳೆ. ಹೆಂಡತಿ ಆಟೋ ಚಾಲಕನೊಂದಿಗೆ ಓಡಿಹೋದ ಸುದ್ದಿ ಗೊತ್ತಾಗುತ್ತಿದ್ದಂತೆ ಆ ಕೋಟ್ಯಾಧೀಶ್ವರ ತಲೆ ಮೇಲೆ ಕೈ ಹೊತ್ತು ಕೂತಿದ್ದಾರೆ.
ಮಧ್ಯಪ್ರದೇಶದ ಇಂದೋರ್ನಲ್ಲಿ ಈ ಘಟನೆ ನಡೆದಿದೆ. ಕೋಟ್ಯಧಿಪತಿಯಾಗಿದ್ದ ಉದ್ಯಮಿ ತನಗಿಂತಲೂ 13 ವರ್ಷ ಸಣ್ಣ ವಯಸ್ಸಿನ ಯುವತಿಯನ್ನು ಮದುವೆಯಾಗಿದ್ದರು. ಆಕೆಗೆ ಗಂಡನಿಂದ ಪ್ರೀತಿ ಸಿಕ್ಕಿರಲಿಲ್ಲ. ಹೀಗಾಗಿ, ಆಟೋ ಚಾಲಕನೊಂದಿಗೆ ಸ್ನೇಹ ಬೆಳೆಸಿದ ಆಕೆ ಆತನೊಂದಿಗೆ ಪರಾರಿಯಾಗಿದ್ದಾಳೆ. ಅಕ್ಟೋಬರ್ 13 ರಂದು ಇಂದೋರ್ನ ಖಜ್ರಾನಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ.


ಇದರಲ್ಲಿ ಇನ್ನಷ್ಟು ಓದಿ :