ಮಳೆಗಾಗಿ ಅಪ್ರಾಪ್ತೆಯ ಬೆತ್ತಲೆ ಮೆರವಣಿಗೆ!

ಭೋಪಾಲ್| Krishnaveni K| Last Modified ಬುಧವಾರ, 8 ಸೆಪ್ಟಂಬರ್ 2021 (09:20 IST)
ಭೋಪಾಲ್: ಮಳೆರಾಯನನ್ನು ಸಂತೃಪ್ತಿಗೊಳಿಸಲು ನಮ್ಮ ದೇಶದಲ್ಲಿ ಎಂತೆಂಥಾ ಮೂಢನಂಬಿಕೆ ಆಚರಣೆ ಮಾಡುತ್ತಾರೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
 > ಮಧ‍್ಯಪ್ರದೇಶದಲ್ಲಿ ಅಪ್ರಾಪ್ತ ಬಾಲಕಿಯನ್ನು ಬೆತ್ತಲೆಗೊಳಿಸಿ ಆಕೆಯ ಕೊರಳಿಗೆ ಕಪ್ಪೆಗಳ ಹಾರ ಹಾಕಿಸಿ ಮೆರವಣಿಗೆ ಮಾಡಿದ ಘಟನೆ ನಡೆದಿದೆ. ಆಕೆಯ ಸುತ್ತಲೂ ಮಹಿಳೆಯರು ಹಾಡುತ್ತಾ, ಚಪ್ಪಾಳೆ ತಟ್ಟುತ್ತಾ ಮಳೆಗಾಗಿ ಪ್ರಾರ್ಥನೆ ನಡೆಸುತ್ತಾರೆ.>   ಈ ವಿಡಿಯೋ ಈಗ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಸ್ಥಳೀಯರನ್ನು ಈ ಬಗ್ಗೆ ಪ್ರಶ್ನಿಸಿದಾಗ ವರುಣ ದೇವನನ್ನು ಸಂತೃಪ್ತಿಗೊಳಿಸಲು ಈ ಆಚರಣೆ ಮಾಡಿರುವುದಾಗಿ ಸಮಜಾಯಿಷಿ ಕೊಟ್ಟಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :