ರೈಲಿನ ಮೇಲೆ ವಿಡಿಯೋ ಶೂಟ್ ಮಾಡಲು ಹೋಗಿ ಸಾವನ್ನಪ್ಪಿದ ಯವಕ

ಅಹಮ್ಮದಾಬಾದ್| Krishnaveni K| Last Modified ಗುರುವಾರ, 25 ನವೆಂಬರ್ 2021 (09:57 IST)
ಅಹಮ್ಮದಾಬಾದ್: ಸೆಲ್ಫೀ ಹುಚ್ಚಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುವ ಘಟನೆಗಳನ್ನು ಎಷ್ಟೋ ಬಾರಿ ನೋಡಿದ್ದೇವೆ. ಅಂತಹದ್ದೇ ಒಂದು ಸಾಹಸ ಮಾಡಲು ಹೋಗಿ 15 ವರ್ಷದ ಯುವಕ ಸಾವನ್ನಪ್ಪಿದ ಘಟನೆ ಗುಜರಾತ್ ನಲ್ಲಿ ನಡೆದಿದೆ.

15 ವರ್ಷದ ಅಪ್ರಾಪ್ತ ಚಲಿಸುತ್ತಿದ್ದ ಗೂಡ್ಸ್ ರೈಲಿನ ಮೇಲೆ ನಿಂತು ಸೆಲ್ಫೀ ವಿಡಿಯೋ ತೆಗೆಯುವ ಸಾಹಸಕ್ಕೆ ಕೈ ಹಾಕಿದ್ದ. ಈ ವೇಳೆ ಹೈ ವೋಲ್ಟೇಜ್ ವಯರ್ ತಗುಲಿ ಮೃತಪಟ್ಟಿದ್ದಾನೆ.


ಸಾಬರ್ಮತಿ ರೈಲ್ವೇ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ವಿದ್ಯುತ್ ತಂತಿ ಸ್ಪರ್ಶಿಸಿದ ರಭಸಕ್ಕೆ ಯುವಕ ರೈಲಿನಿಂದ ನೆಲಕ್ಕೆ ಬಿದ್ದಿದ್ದಾನೆ. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಜೀವ ಉಳಿಸಲಾಗಲಿಲ್ಲ.


ಇದರಲ್ಲಿ ಇನ್ನಷ್ಟು ಓದಿ :