ಶಬರಿಮಲೆಯಲ್ಲಿ ಮಹಿಳೆಯರಿಗೆ ಪ್ರವೇಶ ಸದ್ಯಕ್ಕಿಲ್ಲ?

ತಿರುವನಂತಪುರಂ| Krishnaveni K| Last Modified ಮಂಗಳವಾರ, 16 ಅಕ್ಟೋಬರ್ 2018 (10:56 IST)
ತಿರುವನಂತಪುರಂ: ಋತುಮತಿಯಾಗುವ ಮಹಿಳೆಯರೂ ಶಬರಿಮಲೆ ದೇಗುಲ ಪ್ರವೇಶಿಸಬಹುದು ಎಂಬ ಸುಪ್ರೀಂಕೋರ್ಟ್ ನ ಐತಿಹಾಸಿಕ ತೀರ್ಪು ಜಾರಿಗೆ ಬರುವುದು ಇನ್ನೂ ವಿಳಂಬವಾಗುವ ಸಾಧ್ಯತೆಯಿದೆ.

ಮಹಿಳೆಯರೂ ದೇಗುಲ ಪ್ರವೇಶಕ್ಕೆ ಅನುಮತಿಸಲು ಸ್ವಲ್ಪ ಸಮಯ ನೀಡಬೇಕೆಂದು ಶಬರಿಮಲೆ ದೇಗುಲ ಆಡಳಿತ ಮಂಡಳಿ ತಿರುವಾಂಕೂರ್ ದೇವಸ್ವಂ ಬೋರ್ಡ್ ಸುಪ್ರೀಂಕೋರ್ಟ್ ಗೆ ಸಮಯಾವಕಾಶ ಕೇಳುವ ನಿರೀಕ್ಷೆಯಿದೆ.ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಕೇರಳದಲ್ಲಿ ಹಲವು ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸುತ್ತಿವೆ. ಈ ಹಿನ್ನಲೆಯಲ್ಲಿ ಪ್ರತಿಭಟನೆಯ ಕಾವು ಇಳಿಯುವ ತನಕ ವಿಳಂಬ ನೀತಿ ಅನುಸರಿಸಲು ಆಡಳಿತ ಮಂಡಳಿ ಈ ತೀರ್ಮಾನಕ್ಕೆ ಬಂದಿದೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
ಇದರಲ್ಲಿ ಇನ್ನಷ್ಟು ಓದಿ :