Widgets Magazine

ವಿಕಲಾಂಗ ಮಕ್ಕಳ ಕೊನೆಗಾಣಿಸಿ ತಾನೂ ಸಾವಿಗೆ ಶರಣಾದ ತಾಯಿ

ಕಾನ್ಪುರ| Krishnaveni K| Last Modified ಶನಿವಾರ, 17 ಅಕ್ಟೋಬರ್ 2020 (11:28 IST)
ಕಾನ್ಪುರ: ಹಣಕಾಸಿನ ಸಂಕಷ್ಟದಿಂದಾಗಿ ಕಂಗೆಟ್ಟ 37 ವರ್ಷದ ಮಹಿಳೆಯೊಬ್ಬಳು ತನ್ನ ವಿಕಲಾಂಗ ಮಕ್ಕಳನ್ನು ಕೊಂದು ತಾನೂ ಸಾವಿಗೆ ಶರಣಾದ ಘಟನೆ ಕಾನ್ಪುರದಲ್ಲಿ ನಡೆದಿದೆ.

 
ಪುತ್ರ ಮತ್ತು ಪುತ್ರಿ ಇಬ್ಬರೂ ವಿಕಲಾಂಗರು. ಪತಿ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಆತ ಮನೆಯಲ್ಲಿಲ್ಲದ ವೇಳೆ ಮಹಿಳೆ ಈ ಕೃತ್ಯವೆಸಗಿದ್ದಾಳೆ. ನೆರೆಮನೆಯವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ವಿಕಲಾಂಗ ಮಕ್ಕಳನ್ನು ನೋಡಿಕೊಳ್ಳುವುದು ಮತ್ತು ದೈನಂದಿನ ಅಗತ್ಯಗಳಿಗಾಗಿ ಹಣಕಾಸಿನ ಅಡಚಣೆಯಿತ್ತು. ಇದೇ ಕಾರಣಕ್ಕೆ ಈ ಕೃತ್ಯವೆಸಗಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ಪೊಲೀಸರು ಕಂಡುಕೊಂಡಿದ್ದಾರೆ.




ಇದರಲ್ಲಿ ಇನ್ನಷ್ಟು ಓದಿ :