Widgets Magazine

ಶೀಲಕೆಡಿಸಲು ಹೊರಟ ಆಟೋ ಚಾಲಕನಿಗೆ ದಾರಿಹೋಕ ಮಾಡಿದ್ದೇನು ಗೊತ್ತಾ?

ನವದೆಹಲಿ| Krishnaveni K| Last Modified ಗುರುವಾರ, 22 ಅಕ್ಟೋಬರ್ 2020 (11:02 IST)
ನವದೆಹಲಿ: ತನ್ನದೇ ಆಟೋದಲ್ಲಿ ಕುಳಿತಿದ್ದ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ, ಆಕೆಯ ಮಾನಭಂಗಕ್ಕೆ ಪ್ರಯತ್ನಿಸಿದ ಆಟೋ ಚಾಲಕನಿಗೆ ದಾರಿಹೋಕನೊಬ್ಬ ತಕ್ಕ ಶಾಸ್ತಿ ಮಾಡಿದ್ದಾನೆ.
 

ಪಂಜಾಬ್ ನಲ್ಲಿ ಈ ಘಟನೆ ನಡೆದಿದೆ. ದಾರಿ ಮಧ್ಯೆ ಆಟೋ ನಿಲ್ಲಿ ಮಹಿಳೆಯ ಮಾನಭಂಗಕ್ಕೆ ಪ್ರಯತ್ನಿಸುತ್ತಿದ್ದ. ಈ ವೇಳೆ ಪಕ್ಕದಲ್ಲೇ ಸಾಗುತ್ತಿದ್ದ ವ್ಯಕ್ತಿಯೊಬ್ಬ ಆರೋಪಿಯನ್ನು ಹೊರಗೆಳೆದು ಮಹಿಳೆಯನ್ನು ಕಾಪಾಡಿದ್ದಾನೆ. ಆದರೆ ತಕ್ಷಣವೇ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಇದೀಗ ಮಹಿಳೆ ಘಟನೆ ಕುರಿತು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :