ಎಳೆಯ ಕಂದನನ್ನು ಹಿಂಸಿಸಿ ಕೊಂದ ಮಲತಂದೆ

ತಿರುವನಂತಪುರಂ| Krishnaveni K| Last Modified ಬುಧವಾರ, 7 ಏಪ್ರಿಲ್ 2021 (08:55 IST)
ತಿರುವನಂತಪುರಂ: ಐದು ವರ್ಷದ ಹೆಣ್ಣು ಮಗಳನ್ನು ಆಕೆಯ ಮಲತಂದೆ ಕ್ರೂರವಾಗಿ ಹಿಂಸಿಸಿ ಕೊಲೆ ಮಾಡಿದ ಘಟನೆ ಕೇರಳದ ಪಟ್ಟಣಂತಿಟ್ಟದಲ್ಲಿ ನಡೆದಿದೆ.

 
ಮದ್ಯದ ಅಮಲಿನಲ್ಲಿ 23 ವರ್ಷದ ಮಲತಂದೆ ಈ ಕೃತ್ಯವೆಸಗಿದ್ದಾನೆ. ತಾಯಿ ಹೊರಗಡೆ ಹೋಗಿದ್ದಾಗ ಮಗುವಿಗೆ ಚಿತ್ರಹಿಂಸೆ ಕೊಟ್ಟ ಆರೋಪಿ ಆಕೆಯ ಸಾವಿಗೆ ಕಾರಣವಾಗಿದ್ದಾನೆ.
 
ತಾಯಿ ಮನೆಗೆ ಬಂದಾಗ ಕೃತ್ಯದ ಬಗ್ಗೆ ಆರೋಪಿಯನ್ನು ಪ್ರಶ್ನಿಸಿದ್ದಕ್ಕೆ ಆಕೆಗೂ ದೈಹಿಕವಾಗಿ ಥಳಿಸಿದ್ದಾನೆ. ಬಳಿಕ ತಾಯಿ ನೆರೆಹೊರೆಯವರ ಸಹಾಯದಿಂದ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :