ವಿಳಾಸ ಕೊಡದ ಕಾರಣಕ್ಕೆ ಕೊವಿಡ್ ರೋಗಿಗಳಿಗೆ ಅಡ್ಮಿಷನ್ ನಿರಾಕರಿಸುವಂತಿಲ್ಲ: ಸುಪ್ರೀಂ

ನವದೆಹಲಿ| Krishnaveni K| Last Modified ಸೋಮವಾರ, 3 ಮೇ 2021 (10:48 IST)
ನವದೆಹಲಿ: ಯಾವುದೇ ಕೊರೋನಾ ರೋಗಿಗೂ ಸರಿಯಾದ ವಿಳಾಸ ಕೊಡಲಿಲ್ಲವೆಂಬ ಕಾರಣಕ್ಕೆ ಆಸ್ಪತ್ರೆಗಳಲ್ಲಿ ಅಡ್ಮಿಷನ್ ನಿರಾಕರಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ.
 

ಸ್ಥಾನಿಕ ವಿಳಾಸ ಇಲ್ಲದ ಮಾತ್ರಕ್ಕೆ ಯಾವುದೇ ರೋಗಿಗೂ ಆಸ್ಪತ್ರೆಯಲ್ಲಿ ಅಡ್ಮಿಷನ್ ನಿರಾಕರಿಸುವುದು ಅಥವಾ ಸೂಕ್ತ ಔಷಧಿ ನೀಡದೇ ಇರಬಾರದು ಎಂದು ಕೋರ್ಟ್ ಹೇಳಿದೆ.
 
ಐಡೆಂಟಿಟಿ ಪ್ರೂಫ್ ಇಲ್ಲದೇ ಇದ್ದರೂ ಎಲ್ಲಾ ಕೊರೋನಾ ರೋಗಿಗಳಿಗೂ ಸರಿಯಾದ ಚಿಕಿತ್ಸೆ ಸಿಗುವಂತಾಗಬೇಕು. ಈ ಕುರಿತು ಕೇಂದ್ರ ಇನ್ನು ಎರಡು ದಿನಗಳೊಗಾಗಿ ಆಸ್ಪತ್ರೆ ದಾಖಲಾತಿ ಕುರಿತು ರಾಷ್ಟ್ರೀಯ ನೀತಿಯೊಂದನ್ನು ರೂಪಿಸಬೇಕು ಎಂದು ಸುಪ್ರೀಂ ಸಲಹೆ ನೀಡಿದೆ.
ಇದರಲ್ಲಿ ಇನ್ನಷ್ಟು ಓದಿ :