ಫೋಟೋ ತೋರಿಸಿ ಬೆದರಿಕೆ: ಜೀವಕೊನೆಗಾಣಿಸಿದ ಯುವತಿ

ಲಕ್ನೋ| Krishnaveni K| Last Modified ಗುರುವಾರ, 29 ಅಕ್ಟೋಬರ್ 2020 (11:10 IST)
ಲಕ್ನೋ: ಪ್ರೀತಿಸು ಎಂದು ಹಿಂದೆ ಬಿದ್ದಿದ್ದ ಯುವಕ ಫೋಟೋ ತೋರಿಸಿ ಬೆದರಿಕೆ ಹಾಕುತ್ತಿದ್ದರಿಂದ ಬೇಸತ್ತ ಅಪ್ರಾಪ್ತ ಯುವತಿ ಜೀವಕ್ಕೇ ಅಂತ್ಯ ಹಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

 
ಯುವತಿಯ ಮನೆಯಲ್ಲಿ ಕೆಲವು ವರ್ಷಗಳ ಹಿಂದೆ ಆರೋಪಿ ಬಾಡಿಗೆಗಿದ್ದ ಎನ್ನಲಾಗಿದೆ. ಇದೀಗ ತನ್ನದೇ ಅಂಗಡಿಯಿಟ್ಟುಕೊಂಡಿರುವ ಆರೋಪಿ ಯುವತಿಯ ಕೆಲವು ಖಾಸಗಿ ಫೋಟೋಗಳನ್ನು ಮೊಬೈಲ್ ನಲ್ಲಿ ಸೇವ್ ಮಾಡಿಕೊಂಡು ಪ್ರೀತಿಸದಿದ್ದರೆ ಇದನ್ನು ಬಹಿರಂಗಗೊಳಿಸುವುದಾಗಿ ಬೆದರಿಸುತ್ತಿದ್ದ. ಇದರಿಂದ ಬೇಸತ್ತ ಯುವತಿ ಮನೆಯಲ್ಲಿ ಯಾರೂ ಇಲ್ಲದೇ ಇದ್ದಾಗ ಜೀವಕೊನೆಗಾಣಿಸಿದ್ದಾಳೆ. ಇದೀಗ ಆರೋಪಿಯನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :