ಸ್ನೇಹಿತನ ಜೊತೆ ಕೂತಿದ್ದಕ್ಕೆ ಯುವತಿಗೆ ಕಿರುಕುಳ

ಗಯಾ| Krishnaveni K| Last Modified ಮಂಗಳವಾರ, 23 ಫೆಬ್ರವರಿ 2021 (10:30 IST)
ಗಯಾ: ಗೆಳೆಯನ ಜೊತೆ ಏಕಾಂತ ಸ್ಥಳದಲ್ಲಿ ಕೂತಿದ್ದಕ್ಕೆ ಯುವತಿಯನ್ನು ಯುವಕರ ಗುಂಪೊಂದು ಚುಡಾಯಿಸಿ ಕಿರುಕುಳ ನೀಡಿದ ಘಟನೆ ಗಯಾದಲ್ಲಿ ನಡೆದಿದೆ.
 

ಏಕಾಂತ ಸ್ಥಳದಲ್ಲಿ ಪುರುಷ ಸ್ನೇಹಿತನೊಂದಿಗಿದ್ದಿದ್ದನ್ನು ನೋಡಿದ ಗುಂಪೊಂದು ಆಕೆಯನ್ನು ಎಳೆದಾಡಿ ಹಲ್ಲೆ ನಡೆಸಿದ್ದಲ್ಲದೆ, ವಿಡಿಯೋ ಮಾಡಲು ಯತ್ನಿಸಿದೆ. ಅಷ್ಟೇ ಅಲ್ಲ, ಆಕೆಯನ್ನು ಬಿಟ್ಟುಬಿಡುವಂತೆ ಮನವಿ ಮಾಡುತ್ತಿದ್ದ ಸ್ನೇಹಿತನಿಗೂ ಥಳಿಸಲಾಗಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :