ವಿಚ್ಛೇದನಕ್ಕಾಗಿ ಕುಟುಂಬದವರ ಜತೆಯೇ ಲಾಲೂ ಪ್ರಸಾದ್ ಪುತ್ರ ತೇಜ್ ಪ್ರತಾಪ್ ರಂಪಾಟ

ಪಾಟ್ನಾ, ಭಾನುವಾರ, 11 ನವೆಂಬರ್ 2018 (09:42 IST)

ಪಾಟ್ನಾ: ಮದುವೆಯಾದ ಆರೇ ತಿಂಗಳಿಗೆ ಪತ್ನಿ ಐಶ್ವರ್ಯಾ ರೈಗೆ ನೀಡಲು ಮುಂದಾಗಿರುವ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಯಾದವ್ ಇದೀಗ ವಿಚ್ಛೇದನಕ್ಕಾಗಿ ಪಟ್ಟು ಹಿಡಿದು ಕೂತಿದ್ದಾರೆ.
 
ಪತ್ನಿಗೆ ವಿಚ್ಛೇದನ ನೀಡುವ ತಮ್ಮ ನಿರ್ಧಾರವನ್ನು ಬೆಂಬಲಿಸದಿದ್ದರೆ ಮನೆಗೇ ಬರುವುದಿಲ್ಲ ಎಂದು ತೇಜ್ ಪ್ರತಾಪ್ ರಂಪಾಟ ಮಾಡುತ್ತಿದ್ದು, ಹೋಟೆಲ್ ಒಂದರಲ್ಲಿ ತಂಗಿದ್ದಾರೆ ಎನ್ನಲಾಗಿದೆ.
 
ನನ್ನ ಹಾಗೂ ಐಶ್ವರ್ಯಾ ನಡುವಿನ ಬಿರುಕು ಮರಳಿ ಸರಿಪಡಿಸಲಾಗದ್ದು. ಹೀಗಾಗಿ ನನಗೆ ವಿಚ್ಛೇದನ ಬೇಕೇ ಬೇಕು. ಇದನ್ನು ಬೆಂಬಲಿಸುವವರೆಗೆ ನಾನು ಮನೆಗೆ ಮರಳುವುದಿಲ್ಲ ಎಂದು ತೇಜ್ ಪ್ರತಾಪ್ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಬೇಡಿಕೆ ಮುಂದಿಟ್ಟಿದ್ದಾರೆ.
 
ಆದರೆ ತೇಜ್ ಪ್ರತಾಪ್ ನಿರ್ಧಾರದ ಬಗ್ಗೆ ಕುಟುಂಬದವರಲ್ಲಿ ಅಸಮಾಧಾನವಿದೆ ಎನ್ನಲಾಗಿದೆ. ಈ ನಡುವೆ ಮೇವು ಹಗರಣದಲ್ಲಿ ಜೈಲು ಪಾಲಾಗಿರುವ ಲಾಲೂ ಪ್ರಸಾದ್ ಯಾದವ್ ಅನಾರೋಗ್ಯದ ನಿಮಿತ್ತ ರಾಂಚಿಯ ಆಸ್ಪತ್ರೆಯಲ್ಲಿದ್ದು, ಪುತ್ರನ ವೈವಾಹಿಕ ಜೀವನ ಮುರಿದು ಬಿದ್ದ ವಿಚಾರ ಅವರ ಆರೋಗ್ಯವನ್ನು ಮತ್ತಷ್ಟು ಹದಗೆಡಿಸಿದೆ ಎನ್ನಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕಿತ್ತಾಟವಾಡಿ ಕೊನೆಗೆ ಬಾಯ್ ಫ್ರೆಂಡ್ ಮರ್ಮಾಂಗಕ್ಕೇ ಕತ್ತರಿ ಹಾಕಿದ ವಿವಾಹಿತ ಮಹಿಳೆ

ನವದೆಹಲಿ: ಬಾಯ್ ಫ್ರೆಂಡ್ ಜತೆ ಕಿತ್ತಾಟವಾಡಿದ ಬಳಿಕ ಮಹಿಳೆಯೊಬ್ಬಾಕೆ ಆತನ ಮರ್ಮಾಂಗಕ್ಕೇ ಕತ್ತರಿ ಹಾಕಿದ ...

news

ಧೂಮಪಾನ ಮಾಡಬೇಡಿ ಎಂದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನು ಕೊಲೆ ಮಾಡಿದರು!

ನವದೆಹಲಿ: ಧೂಮಪಾನ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಪಂಜಾಬ್-ಬಿಹಾರ್ ನಡುವಿನ ಜಲಿಯನ್ ವಾಲಾ ಎಕ್ಸ್ ...

news

ಟಿಪ್ಪು ಜಯಂತಿ ಬೇಕಿದ್ದಿದ್ದು ನಿಮಗೇ: ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕರ ವಾಗ್ದಾಳಿ

ಬೆಂಗಳೂರು: ವಿವಾದಿತ ಟಿಪ್ಪು ಜಯಂತಿ ವ್ಯಾಪಕ ವಿರೋಧದ ನಡುವೆಯೂ ನಿನ್ನೆ ನೆರವೇರಿದೆ. ಅದರ ಜತೆಗೆ ಆಡಳಿತರೂಢ ...

news

ಮಹಿಳಾ ಟೆಕ್ಕಿಯ ಬಟ್ಟೆ ಹರಿದ ಆರೋಪಿಗಳು ಅಂದರ್

ಕ್ಷುಲ್ಲಕ ಕಾರಣಕ್ಕೆ ಮಹಿಳಾ ಟೆಕ್ಕಿಯ ಕೆನ್ನೆಗೆ ಹೊಡೆದು ಆಕೆಯ ಬಟ್ಟೆಯನ್ನು ಹರಿದ ಇಬ್ಬರು ಆರೋಪಿಗಳನ್ನು ...