Widgets Magazine

ಲೈಂಗಿಕ ಉದ್ರೇಕದ ಮಾತ್ರೆ ನೀಡಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಸಹೋದ್ಯೋಗಿಗಳು

ನವದೆಹಲಿ| pavithra| Last Modified ಮಂಗಳವಾರ, 16 ಅಕ್ಟೋಬರ್ 2018 (06:53 IST)
ನವದೆಹಲಿ : ಸಹೋದ್ಯೋಗಿ ಯುವತಿಗೆ ಲೈಂಗಿಕ ಉದ್ರೇಕದ ಮಾತ್ರೆ ನೀಡಿ ಸಾಮೂಹಿಕ ನಡೆಸಿರುವ ಘಟನೆಯೊಂದು ವರದಿಯಾಗಿದೆ.


ಬಿರ್ಜು(25), ವಿನೋದ್​ ಕುಮಾರ್​ (31) ಈ ಕೃತ್ಯ ಎಸಗಿದ ಕಾಮುಕರು. ಇವರಿಬ್ಬರು ಹಾಗೂ ಯುವತಿ ಬಹು ಅಂತರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಶನಿವಾರ ರಾತ್ರಿ ಮನೆಗೆ ಡ್ರಾಪ್ ನೀಡುವುದಾಗಿ ಹೇಳಿ ಪಾನೀಯದಲ್ಲಿ ಲೈಂಗಿಕ ಉದ್ರೇಕದ ಮಾತ್ರೆಗಳನ್ನು
ಸೇರಿಸಿ ಯುವತಿಗೆ ಕುಡಿಸಿ ಆಕೆಯನ್ನು ಫ್ಲಾಟ್​ಗೆ ಕರೆದೊಯ್ದು, ಅತ್ಯಾಚಾರ ನಡೆಸಿದ್ದಾರೆ.


ಈ ವಿಚಾರವನ್ನು ತನ್ನ ಮನೆಯವರಿಗೆ ತಿಳಿಸಿದ ಸಂತ್ರಸ್ತ್ರ ಯುವತಿ ,ಭಾನುವಾರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಆಕೆ ಮೇಲೆ ಅತ್ಯಾಚಾರವಾಗಿರುವುದು ದೃಢಪಟ್ಟಿದೆ. ಘಟನೆ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿ.



ಇದರಲ್ಲಿ ಇನ್ನಷ್ಟು ಓದಿ :