ಲಸ್ಸಿ ಕುಡಿದು ಜನರ ಆರೋಗ್ಯ ಸ್ಥಿತಿ ಗಂಭೀರ

ಒಡಿಶಾ| pavithra| Last Modified ಭಾನುವಾರ, 2 ಮೇ 2021 (12:19 IST)
ಒಡಿಶಾ : ಲಸ್ಸಿ ಕುಡಿದು ಮಕ್ಕಳು ಸೇರಿದಂತೆ ಕನಿಷ್ಠ 100 ಜನರು ಅನಾರೋಗ್ಯಕ್ಕೀಡಾದ ಘಟನೆ ಒಡಿಶಾದ ಮಲ್ಕಂಗಿರಿ ಜಿಲ್ಲೆಯಲ್ಲಿ ನಡೆದಿದೆ.

ಜನರು ಜಾತ್ರೆಗೆ ಹೋಗಿದ್ದಾಗ ಅಲ್ಲಿ ಲಸ್ಸಿ ಸೇವಿಸಿದ್ದಾರೆ. ಆದರೆ ಮನೆಗೆ ಬರುತ್ತಿದ್ದಂತೆ ಅವರಿಗೆ ಹೊಟ್ಟೆ ನೋವಿನ ಸಮಸ್ಯೆ ಕಾಡಿದೆ. ಮಧ್ಯರಾತ್ರಿಯ ವೇಳೆ ಹಲವರು ಗಂಭೀರ ಸ್ಥಿತಿಗೆ ತಲುಪಿದ್ದಾರೆ. ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ವೈದ್ಯರು ತನಿಖೆ ಮಾಡುತ್ತಿದ್ದಾರೆ, ಪಾನೀಯದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.  ಮಾರಾಟಗಾರ ಕಲುಷಿತ ನೀರು ಬೆರೆಸಿದ ಕಾರಣದಿಂದ ಇದು ಸಂಭವಿಸಿರಬಹುದು  ಎಂದು ವೈದ್ಯರು ತಿಳಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :