ವಿಡಿಯೋ ಗೇಮ್ ಆಟಕ್ಕೆ ಬಲಿಯಾಯ್ತು ಯುವಕನ ಪ್ರಾಣ

ಚೆನ್ನೈ| pavithra| Last Updated: ಬುಧವಾರ, 6 ನವೆಂಬರ್ 2019 (09:35 IST)
ಚೆನ್ನೈ : ಮೊಬೈಲ್ ನಲ್ಲಿ ವಿಡಿಯೋ ಗೇಮ್ ಆಡುವ ವಿಚಾರಕ್ಕೆ 18 ವರ್ಷದ ಯುವಕನೊಬ್ಬ ತನ್ನ ಸ್ನೇಹಿತನನ್ನು ಗುಂಡಿಕ್ಕಿ ಕೊಂದ ಘಟನೆ ಚೆನ್ನೈನ ವೆಂಕಟಮಂಗಲಂ ಎಂಬಲ್ಲಿ ನಡೆದಿದೆ.
> > ಮುಕೇಶ್ ಕುಮಾರ್ ಕೊಲೆಯಾದ ಸ್ನೇಹಿತ, ವಿಜಯ್ ಕುಮಾರ್ ಕೊಲೆ ಮಾಡಿದ ಯುವಕ. ವೃತ್ತಿಯಲ್ಲಿ ಫುಡ್ ಡೆಲಿವರಿ ಬಾಯ್ ಆಗಿದ್ದ ವಿಜಯ ಕುಮಾರ್ ಮುಕೇಶ್ ಮನೆಗೆ ಬಂದು ಆತನೊಂದಿಗೆ ವಿಡಿಯೋ ಗೇಮ್ ಆಡುತ್ತಿದ್ದ. ಆದರೆ ಇದ್ದಕ್ಕಿದ್ದಂತೆ ಮನೆಯೊಳಗೆ ಗುಂಡಿನ ಸಪ್ಪಳ ಕೇಳಿದ್ದು,  ಮನೆಯ ಹೊರಗಿದ್ದ ಮುಕೇಶ್ ಸಹೋದರ ಒಳಗೆ ಬಂದು ನೋಡಿದಾಗ ಮುಕೇಶ್ ಹಣೆಗೆ ಗುಂಡು ತಗುಲಿದ್ದು, ವಿಜಯ್ ಅಲ್ಲಿಂದ ಪರಾರಿಯಾಗಿದ್ದ.


ಆದರೆ ಸಾವು ಬದುಕಿನ ಜೊತೆ ಹೋರಾಡುತ್ತಿದ್ದ ಮುಕೇಶ್ ನನ್ನು ಆಸ್ಪತ್ರೆಗೆ ದಾಖಲಿಸಿದರೂ ಆತ ಸಾವನ್ನಪ್ಪಿದ್ದಾನೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ವಿಜಯ್ ಯಾವ ಕಾರಣಕ್ಕೆ ಮುಕೇಶ್ ನನ್ನು ಕೊಲೆ ಮಾಡಿದ ಎಂಬ ವಿಚಾರ ತಿಳಿದುಬಂದಿಲ್ಲ.
ಇದರಲ್ಲಿ ಇನ್ನಷ್ಟು ಓದಿ :