ಕೇವಲ 2500ರೂ.ಗಾಗಿ ಅಣ್ಣನನ್ನು ಕೊಂದ ವ್ಯಕ್ತಿ

ತಂಜಾವೂರು| pavithra| Last Modified ಗುರುವಾರ, 7 ಜನವರಿ 2021 (07:29 IST)
ತಂಜಾವೂರು : ತಮಿಳುನಾಡಿನ ತಂಜಾವೂರಿನಲ್ಲಿ ವ್ಯಕ್ತಿಯೊಬ್ಬ ಹಣಕ್ಕಾಗಿ ತನ್ನ ಅಣ್ಣನನ್ನೇ ಕೊಲೆ ಮಾಡಿದ್ದಾನೆ.  

ಮದ್ಯ ದಾಸನಾಗಿದ್ದ ಆರೋಪಿ 2500ರೂ ಗಾಗಿ ತನ್ನ ತಂದೆಯ ಮೇಲೆ ಹಲ್ಲೆ ಮಾಡಿದ್ದಾನೆ. ಈ ವಿಚಾರ ತಿಳಿದ ಅವನ ಅಣ್ಣ ಕೋಪಗೊಂಡು ಆತನ ಬಳಿ ವಾದಕ್ಕಿಳಿದಿದ್ದಾನೆ. ಇಬ್ಬರ ನಡುವೆ ಜಗಳ ನಡೆದು ಆರೋಪಿ ಲಾಂಗ್ ನಿಂದ ಅಣ್ಣನ ತಲೆಗೆ ಹೊಡೆದಿದ್ದಾನೆ. ಇದರಿಂದ ಅಣ್ಣ ಅಲ್ಲೇ ಮೃತಪಟ್ಟಿದ್ದಾನೆ.

ಈ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :