ಸದ್ಯಕ್ಕೆ ಎನ್ ಆರ್ ಸಿ ಜಾರಿ ಮಾಡಲ್ಲ ಎಂದ ಕೇಂದ್ರ ಸರ್ಕಾರ

ನವದೆಹಲಿ| pavithra| Last Modified ಶನಿವಾರ, 21 ಡಿಸೆಂಬರ್ 2019 (06:43 IST)
ನವದೆಹಲಿ : ಸದ್ಯಕ್ಕೆ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ)ಯನ್ನು ದೇಶಾದ್ಯಂತ ಜಾರಿಗೆ ತರುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಜಿ.ಕಿಶನ್ ರೆಡ್ಡಿ, ದೇಶದ್ಯಂತ ಎನ್.ಆರ್.ಸಿ ಯನ್ನು ಜಾರಿ ತರುವ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ.  ಅದಕ್ಕಾಗಿ ನಿಯಮಗಳನ್ನು ರೂಪಿಸುತ್ತಿದ್ದೇವೆ. ಆದರೆ ಎನ್.ಆರ್.ಸಿ ಜಾರಿಗೆ ಯಾವುದೇ ದಿನಾಂಕ ಇದುವರೆಗೂ ನಿಗದಿ ಮಾಡಿಲ್ಲ. ಎನ್.ಆರ್.ಸಿ ಶೀಘ್ರದಲ್ಲಿ ಜಾರಿ ಆಗುವುದಿಲ್ಲ. ಸೂಕ್ತ ಸಮಯ ನೋಡಿಕೊಂಡು ಜಾರಿ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :