ಬಯಲಾಯ್ತು ಶಿಕ್ಷಕಿಯ ಕೊಲೆ ರಹಸ್ಯ

ನವದೆಹಲಿ, ಶನಿವಾರ, 3 ನವೆಂಬರ್ 2018 (14:50 IST)

ನವದೆಹಲಿ : ದೆಹಲಿಯ ವಬಾನಾ ಪ್ರದೇಶದಲ್ಲಿ ನಡೆದಿದ್ದ ಶಿಕ್ಷಕಿಯೊಬ್ಬರ ಕೊಲೆಯ ರಹಸ್ಯವನ್ನು ಕಂಡುಹಿಡಿಯುವಲ್ಲಿ ಇದೀಗ ಪೊಲೀಸರು ಯಶಸ್ವಿಯಾಗಿದ್ದಾರೆ.


ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಕಿ ಪತಿ ಮಂಜೀತ್ (38), ಆತನ ಪಾಟ್ನರ್ ಏಂಜೆಲ್ ಗುಪ್ತಾ ಮತ್ತು ಏಂಜೆಲ್ ಗುಪ್ತಾಳ ತಂದೆ ರಾಜೀವ್ ಬಂಧಿತ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಏಂಜೆಲ್ ಗುಪ್ತಾ ವೃತ್ತಿಯಲ್ಲಿ ಮಾಡೆಲ್ ಆಗಿದ್ದಾಳೆ ಎಂದು ತಿಳಿದು ಬಂದಿದೆ.


ಹರಿಯಾಣದ ಸೋನೆಪಟ್ ನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ 38 ವರ್ಷದ ಸುನೀತಾ ಎಂಬುವವರು ಬವಾನಾದಲ್ಲಿ ತನ್ನ ಸ್ಕೂಟರ್ ಪಕ್ಕದಲ್ಲಿ ಗುಂಡಿನ ಪೆಟ್ಟು ತಿಂದು ಸಾವನಪ್ಪಿದ್ದರು. ಇವರ ಕೊಲೆಯ ಪ್ರಕರಣವನ್ನು ತನಿಖೆ ನಡೆಸಿದ ಪೊಲೀಸರಿಗೆ ಶಿಕ್ಷಕಿ ಸುನಿತಾ  ಡೈರಿಯಲ್ಲಿ ಏಂಜಲ್ ಗುಪ್ತಾ ಬಗ್ಗೆ ಮಾಹಿತಿಯಿತ್ತು. ಈ ಬಗ್ಗೆ ಏಂಜಲ್ ಗುಪ್ತಾಳನ್ನು ವಶಕ್ಕೆ ಪಡೆದ ಪೊಲೀಸರು ಕಾಲ್ ಹಿಸ್ಟರಿ ಪರಿಶೀಲಿಸಿದ್ದಾರೆ.


ಈ ವೇಳೆ ಸುನಿತಾ ಪತಿ  ಮಂಜೀತ್ ಹಾಗೂ ಏಂಜಲ್ ನಡುವೆ ಸಂಬಂಧವಿದ್ದು, ಈ ಬಗ್ಗೆ ಪತ್ನಿ ಸುನೀತಾಳ ವಿರೋಧವಿದ್ದ ಕಾರಣ ಕಾಂಟ್ರ್ಯಾಕ್ಟ್ ಕೊಲೆಗಾರರನ್ನು ನೇಮಕ ಮಾಡಿ ಆಕೆಯನ್ನು ಹತ್ಯೆ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಸುನಿತಾ ಕೊಲೆಗೆ ಗುಪ್ತಾಳ ತಂದೆಯೂ ಕೂಡ ಸಾಥ್ ನೀಡಿದ್ದು, ಸದ್ಯಕ್ಕೆ ಪೊಲೀಸರು ಮೂವರನ್ನು ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬೆಂಗಳೂರಿನ ಜನರೇ ಎಚ್ಚರ! ಎಲ್ಲೆಂದರಲ್ಲಿ ಕಸ ಎಸೆದರೆ 500 ದಂಡ

ಬೆಂಗಳೂರು : ಬೆಂಗಳೂರಿನಲ್ಲಿ ಜನರು ಎಲ್ಲೆಂದರಲ್ಲಿ ಕಸವನ್ನು ಎಸೆದು ಇಡೀ ಸಿಟಿಯನ್ನು ಹಾಳುಮಾಡುತ್ತಿರುವ ...

news

ಆರತಿ ತಟ್ಟೆಗೆ ಹಣ ಹಾಕಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡರು

ಬಾಗಲಕೋಟೆ : ಇಂದು ಜಮಖಂಡಿ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವನೆ ನಡೆಯುತ್ತಿದ್ದು, ಈ ವೇಳೆ ಕಾಂಗ್ರೆಸ್ ...

news

ಮಾಜಿ ಶಾಸಕ ಎಂ.ಪಿ. ರವೀಂದ್ರ ನಿಧನ

ಬೆಂಗಳೂರು : ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಅವರ ಪುತ್ರ ಮಾಜಿ ಶಾಸಕ ಎಂ.ಪಿ. ರವೀಂದ್ರ ಇಂದು ...

news

ಅಕ್ಕಾ ರಮ್ಯಾಕ್ಕಾ ಬಾರಕ್ಕಾ... ಓಟ್ ಮಾಡಕ್ಕಾ...! ನಟಿ ರಮ್ಯಾಗೆ ಬಿಜೆಪಿ ಟಾಂಗ್

ಬೆಂಗಳೂರು: ಇತ್ತೀಚೆಗಷ್ಟೇ ಪ್ರಧಾನಿ ಮೋದಿ ವಿರುದ್ಧ ಹಕ್ಕಿ ಪಿಕ್ಕೆಯ ಆಕ್ಷೇಪಾರ್ಹ ಟ್ವೀಟ್ ಮಾಡಿ ...