Widgets Magazine

ಸೆಕ್ಸ್ ಗೆ ಒಲ್ಲೆ ಎಂದಿದ್ದಕ್ಕೆ ಇಬ್ಬರು ಮಕ್ಕಳ ತಾಯಿಗೆ ಬಂದಿದೆ ಇಂತಹ ದುರ್ಗತಿ

ಥಾಣೆ| pavithra| Last Modified ಶುಕ್ರವಾರ, 15 ಫೆಬ್ರವರಿ 2019 (09:35 IST)
ಥಾಣೆ : ಸೆಕ್ಸ್ ಗೆ ಒಲ್ಲೆ ಎಂದ ವಿವಾಹಿತ ಮಹಿಳೆಯನ್ನು ಯುವಕನೊಬ್ಬ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಥಾಣೆಯ ಬಿವಾಂಡಿಯಲ್ಲಿ ನಡೆದಿದೆ.


ವಿಕಾಸ್ (25) ಕೊಲೆ ಮಾಡಿದ ಯುವಕ. ಮೃತ ಮಹಿಳೆಗೆ ಇಬ್ಬರು ಮಕ್ಕಳಿದ್ದರು. ಈಕೆಗೆ ಪತಿಯ ಕೆಲಸದ ವಿಚಾರದಲ್ಲಿ ಪರಿಚಯವಾಗಿದ್ದ ವಿಕಾಸ್ ಆಗಾಗ ಮನೆಗೆ ಬರುತ್ತಿದ್ದು, ಈಕೆಯ ಜೊತೆ ಶಾರೀರಿಕ ಸಂಬಂಧ ಕೂಡ ಹೊಂದಿದ್ದ.


ಆದರೆ 25 ದಿನಗಳ ಹಿಂದೆ ಆಕೆಗೆ ಹೆರಿಗೆಯಾದ ಕಾರಣ ಇತ್ತೀಚೆಗೆ ಆತನ ಜೊತೆ ಸಂಬಂಧ ಬೆಳೆಸಲು ನಿರಾಕರಿಸುತ್ತಿದ್ದಳು. ಇದರಿಂದ ಕೋಪಗೊಂಡ ಆತ ಆಕೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಮಗು ಅಳ್ತಿದ್ದ ಶಬ್ಧ ಕೇಳಿ ಪಕ್ಕದ ಮನೆಯವರು ಬಂದು ನೋಡಿದಾಗ ಆಕೆ
ಪ್ರಜ್ಞೆ ತಪ್ಪಿ ಬಿದ್ದಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿ.

ಇದರಲ್ಲಿ ಇನ್ನಷ್ಟು ಓದಿ :