ಇಂದು 73ನೇ ಸ್ವಾತಂತ್ರ್ಯೋತ್ಸವ ಹಿನ್ನಲೆ; ದೆಹಲಿಯ ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಪ್ರಧಾನಿ ಮೋದಿ

ನವದೆಹಲಿ, ಗುರುವಾರ, 15 ಆಗಸ್ಟ್ 2019 (08:37 IST)

ನವದೆಹಲಿ : ಇಂದು ದೇಶದಾದ್ಯಂತ 73ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಮನೆಮಾಡಿದ್ದು, ದೆಹಲಿಯ ಕೆಂಪು ಕೋಟೆ ಇಂದು ನವವಧುವಿನಂತೆ ಕಂಗೊಳಿಸುತ್ತಿದೆ.




ಇಂದು ಎರಡನೇ ಬಾರಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು 6ನೇ ಬಾರಿ ದಿಲ್ಲಿಯ ಕೆಂಪುಕೋಟೆಯಲ್ಲಿ ಮಾಡಿದ್ದಾರೆ. ಬಳಿಕ ಜನರನ್ನುದ್ದೇಶಿಸಿ ಮಾತನಾಡಿದ ಅವರು ದೇಶದ ಜನತೆಗೆ ಸ್ವಾತಂತ್ರ ದಿನಾಚರಣೆ ಮತ್ತು ರಕ್ಷಾಬಂಧನದ ಶುಭಾಶಯಗಳನ್ನು ತಿಳಿಸಿದ್ದಾರೆ.


ಹಾಗೇ ನಮ್ಮ ಜನರ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದೆ. ರೈತರು, ಬಡವರು, ಆದಿವಾಸಿಗಳು, ದಲಿತರ ಅಭಿವೃದ್ಧಿಗೆ ಪಣ ತೊಟ್ಟಿದ್ದೇವೆ. ಶ್ರಮ ಸಂಕಲ್ಪದಿಂದ ಇದು ಸಾಧ್ಯವಾಗಿದೆ. ಉಗ್ರರ ದಮನಕ್ಕೆ ಶಪಥ ಮಾಡಿದ್ದೇವೆ. ರೈತರಿಗಾಗಿ 90 ಸಾವಿರ ಕೋಟಿ ರೂಪಾಯಿ ಮೀಸಲಿಟ್ಟಿದ್ದೇವೆ. ಕಿಸಾನ್ ಸಮ್ಮಾನ್ ಯೋಜನೆ ಜಾರಿಗೊಳಿಸಿದ್ದೇವೆ. ಜನರಲ್ಲಿ ಹೊಸ ಭರವಸೆ ಮೂಡಿಸಿದ್ದೇವೆ ಎಂದು ಹೇಳಿದ್ದಾರೆ.


ದೇಶದ ಅನೇಕ ರಾಜ್ಯಗಳಲ್ಲಿ ಅತಿವೃಷ್ಟಿ ಅಗಿದೆ. ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ಎನ್ ಡಿಆರ್ ಎಫ್ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಭವಿಷ್ಯದ ಜಲ ಕಂಟಕ ನಿರ್ಮೂಲನೆ ಆಗಬೇಕಿದೆ. ಜಲಶಕ್ತಿ ವೃದ್ಧಿಗೆ ಪ್ರತಿಯೊಬ್ಬ ಪ್ರಜೆ ಶ್ರಮಿಸಬೇಕು. ಮುಸ್ಲಿಂ ಸಹೋದರಿಯರಿಗಾಗಿ ತ್ರಿವಳಿ ತಲಾಖ್ ರದ್ದು ಮಾಡಲಾಗಿದೆ. ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ಸಂವಿಧಾನದ 370 ವಿಧಿ ರದ್ದಾಗಿದ್ದು, ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಕನಸು ನನಸು ಮಾಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸ್ವಾತಂತ್ರ್ಯೋತ್ಸವ ಹಿನ್ನಲೆ; ಇಂದು 9 ಗಂಟೆಗೆ ಮುಖ್ಯಮಂತ್ರಿ ಯಡಿಯೂರಪ್ಪರಿಂದ ಧ್ವಜಾರೋಹಣ

ಬೆಂಗಳೂರು : ಪ್ರವಾಹ ಪರಿಸ್ಥಿತಿಯ ನಡುವೆಯು ಇಂದು ರಾಜ್ಯದಾದ್ಯಂತ 73ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನ ...

news

ಶಾಲಾ ಮಕ್ಕಳಿದ್ದ ಬಸ್ ಮೇಲೆ ಉರುಳಿದ ಮರ; ಮುಂದೇನಾಯ್ತು?

ಶಾಲೆಯ ಬಸ್ ವೊಂದರ ಮೇಲೆ ಭಾರೀ ಗಾತ್ರದ ಮರವೊಂದು ಉರುಳಿಬಿದ್ದ ಘಟನೆ ನಡೆದಿದೆ.

news

ರೋಡಿಗೆ ಬಂದ ಅನರ್ಹ ಶಾಸಕ ಮಾಡಿದ್ದೇನು?

ಅನರ್ಹ ಶಾಸಕರೊಬ್ಬರು ರೋಡಿಗೆ ಬಂದು ಈ ಕೆಲಸ ಮಾಡಿದ್ದಾರೆ.

news

ಯಡಿಯೂರಪ್ಪ ಕಾಲಿನ ಗುಣವೇ ಸರಿ ಇಲ್ವಂತೆ

ಮೈತ್ರಿ ಸರಕಾರ ಪತನವಾಗಿ ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ. ಆದರೆ ಬಿಎಸ್ ವೈ ಕಾಲಿನ ...