ಮಾನಭಂಗ ಮಾಡಿದವನಿಗೆ ದಂಡ ವಿಧಿಸಿ ಬಿಟ್ಟುಬಿಟ್ಟ ಗ್ರಾಮ ಮುಖಂಡರು!

ಲಕ್ನೋ| Krishnaveni K| Last Modified ಗುರುವಾರ, 8 ಏಪ್ರಿಲ್ 2021 (08:51 IST)
ಲಕ್ನೋ: ಯುವತಿಯ ಶೀಲಕೆಡಿಸಿ ಬಳಿಕ ಆಕೆ ಗರ್ಭಿಣಿಯೆಂದು ತಿಳಿದ ಮೇಲೆ ಆಕೆಗೆ ಅಬಾರ್ಷನ್ ಮಾಡಿಸಿದ ಯುವಕನನ್ನು ಗ್ರಾಮ ಮುಖಂಡರು 2 ಲಕ್ಷ ರೂ. ದಂಡ ಮತ್ತು 3 ವರ್ಷಗಳವರೆಗೆ ಗ್ರಾಮದಿಂದ ಹೊರಗಟ್ಟಿ ಬಿಟ್ಟ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

 
ಮೂಲಗಳ ಪ್ರಕಾರ ಆರೋಪಿ ಯುವಕ, ಸಂತ್ರಸ್ತೆಯ ನೆರೆಮನೆಯಾತ. ಇಬ್ಬರೂ ಸಂಬಂಧ ಹೊಂದಿದ್ದರು. ಇದೇ ಸಲುಗೆಯಲ್ಲಿ ಯುವಕ ಆಕೆಯೊಂದಿಗೆ ದೈಹಿಕ ಸಂಪರ್ಕ ನಡೆಸಿದ್ದ. ಬಳಿಕ ಆಕೆ ಗರ್ಭಿಣಿಯೆಂದು ಗೊತ್ತಾದಾಗ ಭಯಗೊಂಡು ಗರ್ಭಪಾತ ಮಾಡಿಸಿದ್ದಾನೆ.
 
ಪರಿಣಾಮ ಯುವತಿ ಅಸ್ವಸ್ಥಳಾಗಿದ್ದಾಳೆ. ಇದಾದ ಬಳಿಕ ಯುವತಿ ಮನೆಯಲ್ಲಿ ವಿಷಯ ತಿಳಿಸಿದ್ದಾಳೆ. ಅದರಂತೆ ಗ್ರಾಮ ಮುಖಂಡರು ವಿಚಾರಣೆ ನಡೆಸಿ ದಂಡ ವಿಧಿಸಿ ಆರೋಪಿಯನ್ನು ಬಿಟ್ಟುಬಿಟ್ಟಿದ್ದಾರೆ. ಆದರೆ ಈ ಬಗ್ಗೆ ಪೊಲೀಸರಿಗೆ ತಡವಾಗಿ ಮಾಹಿತಿ ಸಿಕ್ಕಿದ್ದು, ಈಗಷ್ಟೇ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :