Widgets Magazine

ಲೈಂಗಿಕ ದೌರ್ಜನ್ಯಕ್ಕೊಳಗಾದ ಹುಡುಗಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ನೀಚರು

ಉಲಂದ್ ಶಹರ್| pavithra| Last Modified ಶನಿವಾರ, 21 ನವೆಂಬರ್ 2020 (07:34 IST)
ಉಲಂದ್ ಶಹರ್ : ಲೈಂಗಿಕ ದೌರ್ಜನ್ಯಕ್ಕೊಳಗಾದ 15 ವರ್ಷದ ಹುಡುಗಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಕೃಷಿ ಮೈದಾನದ ಬಳಿ ಸ್ಥಳೀಯ ವ್ಯಕ್ತಿಯೊಬ್ಬ ಹುಡುಗಿಗೆ ಮಾದಕ ದ್ರವ್ಯವನ್ನು ನೀಡಿ ಮಾನಭಂಗ ಎಸಗಿದ್ದ. ಈ ಹಿನ್ನಲೆಯಲ್ಲಿ ಹುಡುಗಿ ಆರೋಪಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಆರೋಪಿಯ ಕಡೆಯವರು ದೂರು ವಾಪಸು ಪಡೆಯುವಂತೆ ಹುಡುಗಿಗ ಬೆದರಿಕೆ ಹಾಕಿದ್ದಾರೆ. ಆದರೆ ಸಂತ್ರಸ್ತೆ ಅದನ್ನು ನಿರಾಕರಿಸಿದ್ದಾಳೆ. ಹಾಗಾಗಿ ಸಂತ್ರಸ್ತೆಯ ಮನೆಗೆ ನುಗ್ಗಿ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಹುಡುಗಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ 7 ಜನರ ವಿರುದ್ಧ ಎಫ್ ಐಆರ್ ದಾಖಲಾಗಿದ್ದು, ಐವರನ್ನು ಪೊಲೀಸರು ಬಂಧಿಸಲಾಗಿದ್ದು, ಉಳಿದವರನ್ನು ಬಂಧಿಸಲು ಯತ್ನ ನಡೆಸುತ್ತಿದ್ದಾರೆ  ಎನ್ನಲಾಗಿದೆ.

 


ಇದರಲ್ಲಿ ಇನ್ನಷ್ಟು ಓದಿ :