ಪತ್ನಿ ದ್ರೋಹ ಮಾಡಿದ್ದಳೆಂದು ಪತಿ ಮಾಡಿದ್ದೇನು ?

ನೇತಾನಗರ| pavithra| Last Modified ಶನಿವಾರ, 10 ಅಕ್ಟೋಬರ್ 2020 (08:19 IST)
ನೇತಾನಗರ : ಪತ್ನಿ ದಾಂಪತ್ಯದಲ್ಲಿ ತನಗೆ ದ್ರೋಹ ಮಾಡಿದ್ದಾಳೆ ಎಂದು  ಪತಿಯೊಬ್ಬ ಆಕೆಯ ರುಂಡವನ್ನು ಕತ್ತರಿಸಿದ ಭಯಾನಕ ಘಟನೆ ನೇತಾನಗರದಲ್ಲಿ ನಡೆದಿದೆ.
ಚಿನ್ನಾರ್ ಯಾದವ್ ಕೊಲೆ ಮಾಡಿದ ಆರೋಪಿ, ವಿಮ್ಲಾ(35) ಕೊಲೆಯಾದ ಪತ್ನಿ. ಪತ್ನಿ ದಾಂಪತ್ಯದಲ್ಲಿ ತನಗೆ ದ್ರೋಹ ಮಾಡಿದ್ದಾಳೆ ಎಂದು ಆರೋಪಿ ತನ್ನ ಪತ್ನಿಯ ಜತೆ ಜಗಳವಾಡಿ ಕೊನೆಗೆ ಕೋಪದಿಂದ ಆಕೆಯ ರುಂಡವನ್ನು ಕತ್ತರಿಸಿ ಅದನ್ನು ಹಿಡಿದುಕೊಂಡು ಬಾಬೆರು ಪೊಲೀಸ್ ಠಾಣೆಗೆ ತೆಗೆದುಕೊಂಡು ಬಂದು ಪೊಲೀಸರಿಗೆ ಶರಣಾಗಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.> > ಪೊಲೀಸರು ಆತನನ್ನು ಬಂಧಿಸಿ ಕೊಲೆಗೆ ಬಳಸಿದ ಆಯುಧವನ್ನು ವಶಪಡಿಸಿಕೊಂಡು, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ಪ್ರಾರಂಭಿಸಿದ್ದಾರೆ ಎನ್ನಲಾಗಿದೆ. 


ಇದರಲ್ಲಿ ಇನ್ನಷ್ಟು ಓದಿ :