Widgets Magazine

ಬೆಳಿಗ್ಗೆ ವಾಕಿಂಗ್ ಮಾಡುತ್ತಿದ್ದ ವ್ಯಕ್ತಿಗೆ ದುಷ್ಕರ್ಮಿಗಳು ಮಾಡಿದ್ದೇನು?

ಚೆನ್ನೈ| pavithra| Last Modified ಶುಕ್ರವಾರ, 16 ಅಕ್ಟೋಬರ್ 2020 (10:32 IST)
ಚೆನ್ನೈ : ಮೊಬೈಲ್ ಗಾಗಿ ಬೆಳಿಗ್ಗೆ ವಾಕಿಂಗ್ ಮಾಡುತ್ತಿದ್ದ 60 ವರ್ಷದ ವ್ಯಕ್ತಿಯನ್ನು ಇಬ್ಬರು ದುಷ್ಕರ್ಮಿಗಳು ಕೊಲೆ ಮಾಡಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ತಿರುವಳ್ಳೂರಿನ ಕೊಟ್ಟೈಕುಪ್ಪಂ ನಿವಾಸಿ ಮಾಧವನ್ ಕೊಲೆಯಾದ ವ್ಯಕ್ತಿ. ಇತ್ತೀಚೆಗೆ ಮಾಧವನ್ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಆದಕಾರಣ ಬೆಳಿಗ್ಗೆ ವಾಕಿಂಗ್ ಮಾಡುತ್ತಿದ್ದರು. ಅವರ ಮಗಳು ಅವರಿಗೆ ದುಬಾರಿ ಮೊಬೈಲ್ ನ್ನು ಗಿಫ್ಟ್  ನೀಡಿದ್ದರು. ಆದರೆ ಅವರು ವಾಕಿಂಗ್ ಮಾಡುವಾಗ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಕಬ್ಬಿಣದ ರಾಡ್ ನಿಂದ ಅವರ ಮೇಲೆ ದಾಳಿ ಮಾಡಿ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಕುಸಿದು ಬಿದ್ದ ಮಾಧವನ್ ನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ ಕೂಡ ಅವರು ಆಗಲೇ ಸಾವನಪ್ಪಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಲು ವಿಶೇಷ ತಂಡ ರಚಿಸಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :