ಸೋದರ ಮಾವನ ಜೊತೆ ಪಲ್ಲಂಗ ಏರಿದವಳಿಗೆ ಆಗಿದ್ದೇನು?

ಮೀರತ್| pavithra| Last Modified ಬುಧವಾರ, 27 ಜನವರಿ 2021 (09:34 IST)
ಮೀರತ್ : ಸೋದರ ಮಾವನ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಸಹೋದರಿಯನ್ನು ಸಹೋದರ ಮದುವೆಯ ಹಿಂದಿನ ದಿನ ಗುಂಡಿಕ್ಕಿ ಕೊಂದ  ಘಟನೆ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಲಿಸಾರಿ ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಆರೋಪಿಯ ಸೋದರಿ ಸೋದರ ಮಾವನ ಜೊತೆ 4 ವರ್ಷಗಳಿಂದ ಅನೈತಿಕ ಸಂಬಂಧ ಹೊಂದಿದ್ದಳು. ಈ ವಿಚಾರ ತಿಳಿದ ಅವಳ  ಮನೆಯವರು ಸೋದರ ಮಾವನ ಬಳಿ ಆಕೆಯನ್ನು ಮದುವೆಯಾಗಲು ಹೇಳಿದ್ದಾರೆ. ಆದರೆ ಆತ ಒಪ್ಪಿಕೊಳ್ಳದ  ಹಿನ್ನಲೆಯಲ್ಲಿ ಆಕೆಗೆ ಬೇರೆ ಯುವಕನ ಜೊತೆ ಮದುವೆ ನಿಶ್ಚಯ ಮಾಡಿದ್ದಾರೆ. ಆದರೆ ಸೋದರ ಮಾವ ಆಕೆಯ ಆಕ್ಷೇಪಾರ್ಹ ಚಿತ್ರಗಳನ್ನು ವೈರಲ್ ಮಾಡಿದ್ದಾನೆ.

ಇದರಿಂದ ಕೋಪಗೊಂಡ ಸಹೋದರ ಮದುವೆಯ ಹಿಂದಿನ ದಿನ ಅವಳನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾನೆ.  ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :