Widgets Magazine

ಮಗ ಪ್ರೇಮ ವಿವಾಹವಾಗಿದ್ದಕ್ಕೆ ತಾಯಿಗಾಯ್ತು ಈ ಗತಿ!

ಪಾಟ್ನಾ| pavithra| Last Modified ಮಂಗಳವಾರ, 17 ನವೆಂಬರ್ 2020 (12:38 IST)
ಪಾಟ್ನಾ : ಯುವತಿಯೊಬ್ಬಳ ಜೊತೆ  ಪ್ರೇಮ ವಿವಾಹವಾಗಿದ್ದಕ್ಕೆ ಯುವತಿಯ ಮನೆಯವರು ತಾಯಿಗೆ ಚಿತ್ರಹಿಂಸೆ ನೀಡಿದ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.

ಪರೀಕ್ಷೆ ಬರೆಯಲು ಮನೆಯಿಂದ ಹೊರಗೆ ಹೋದ ಯುವತಿ ದೆಹಲಿಗೆ ಹೋಗಿ ಯುವಕನ ಜೊತೆ ಪ್ರೇಮ ವಿವಾಹವಾಗಿದ್ದಾಳೆ. ಅದಕ್ಕೆ ಸಂಬಂಧಪಟ್ಟ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ನೋಡಿದ ಯುವತಿಯ ಮನೆಯವರು ಯುವಕನ ಮನೆಗೆ ನುಗ್ಗಿ ಆತನ ತಾಯಿಯ ಕೂದಲು ಕತ್ತರಿಸಿ, ಅರೆಬೆತ್ತಲೆಗೊಳಿಸಿ ಹಲ್ಲೆ ಮಾಡಿದ್ದಾರೆ. ಅಲ್ಲದೇ ಇದನ್ನು ತಡೆಯಲು ಬಂದ ಆಕೆಯ ಮನೆಯವರ ಮೇಲೂ ಹಲ್ಲೆ ಮಾಡಿದ್ದಾರೆ.

ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕೆಲವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :