ಗಂಡ ಮನೆಯಲ್ಲಿಲ್ಲದಿದ್ದಾಗ ಮಾವನೇ ಸೊಸೆಯ ಸೆರಗಿಗೆ ಕೈ ಹಾಕಿದ

ಮಧ್ಯಪ್ರದೇಶ| Krishnaveni K| Last Modified ಶುಕ್ರವಾರ, 26 ನವೆಂಬರ್ 2021 (10:23 IST)
ಮಧ್ಯಪ್ರದೇಶ: ಗಂಡ ಮನೆಯಲ್ಲಿಲ್ಲದ ವೇಳೆ ಮಾವನೇ ತನ್ನ ಮೇಲೆ ನಡೆಸಿದ್ದಾನೆಂದು ಮಹಿಳೆಯೊಬ್ಬಳು ಪೊಲೀಸರಿಗೆ ದೂರು ನೀಡಿದ್ದಾಳೆ. ಮಧ‍್ಯಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಗಂಡ 12 ನೇ ತರಗತಿಯಲ್ಲಿ ಓದುತ್ತಿದ್ದಾನೆ. ಆತ ಶಾಲೆಗೆ ಹೋಗಿದ್ದಾಗ ಮಾವ ತನ್ನ ಮೇಲೆ ಅತ್ಯಾಚಾರ ನಡೆಸಿದ್ದು, ಈಗ ಕೊಲೆ ಬೆದರಿಕೆ ಹಾಕುತ್ತಿದ್ದಾನೆ ಎಂದು 20 ವರ್ಷದ ಯುವತಿ ದೂರು ನೀಡಿದ್ದಾಳೆ. ಪೊಲೀಸ್ ಠಾಣೆಗೆ ಗಂಡನ ಜೊತೆಗೆ ಬಂದು ದೂರು ನೀಡಿದ್ದಾಳೆ.


ಆದರೆ ಈ ಆರೋಪಗಳನ್ನು ನಿರಾಕರಿಸಿರುವ ಮಾವ ಇದೆಲ್ಲಾ ತನ್ನ ಹೆಸರಿನಲ್ಲಿರುವ ಆಸ್ತಿ ಕಬಳಿಕೆಗೆ ನಡೆಸುತ್ತಿರುವ ನಾಟಕ ಎಂದಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :