ಭಾವೀ ಪತಿಯ ಜತೆ ಸುತ್ತಾಡಲು ಹೋದ ಯುವತಿಗೆ ಹೀಗಾಗೋಯ್ತಲ್ಲಾ!

ನವದೆಹಲಿ| Krishnaveni K| Last Modified ಭಾನುವಾರ, 8 ನವೆಂಬರ್ 2020 (10:37 IST)
ನವದೆಹಲಿ: ಭಾವೀ ಪತಿಯ ಜತೆ ಕಾರಿನಲ್ಲಿ ಸುತ್ತಾಡಲು ಹೋದಾಗ ನವವಧುವನ್ನು ಬೈಕ್ ನಲ್ಲಿ ಬಂದ ಆಗಂತುಕರು ಗುಂಡು ಹಾಕಿ ಜೀವ ತೆಗೆದ ಘಟನೆ ಗುರ್ಗಾಂವ್ ನಲ್ಲಿ ನಡೆದಿದೆ.

 
ಪೂಜಾ ಶರ್ಮಾ ಎಂಬಾಕೆ ಸಾವನ್ನಪ್ಪಿದವರು. ರಾತ್ರಿ ಡಿನ್ನರ್ ಮುಗಿಸಿ ಕಾರಿನಲ್ಲಿ ಮರಳುತ್ತಿದ್ದಾಗ ಬೈಕ್ ನಲ್ಲಿ ಬಂದ ಮೂವರು ಆರೋಪಿಗಳು ದರೋಡೆಗೆ ಯತ್ನಿಸಿದ್ದು, ವಿಫಲವಾದಾಗ ಗುಂಡು ಹಾರಿಸಿದ್ದಾರೆ. ಇದೀಗ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :