ಸ್ನೇಹ ಬೇಡವೆಂದಿದ್ದಕ್ಕೆ ಬಾಲಕಿ ಮೇಲೆ ಬ್ಲೇಡ್ ನಿಂದ ದಾಳಿ

ಜೈಪುರ| Krishnaveni K| Last Modified ಶುಕ್ರವಾರ, 26 ನವೆಂಬರ್ 2021 (11:45 IST)
ಜೈಪುರ: ಸ್ನೇಹ ಸಂಬಂಧಕ್ಕೆ ನಿರಾಕರಿಸಿದ್ದಕ್ಕೆ 17 ವರ್ಷದ ಅಪ್ರಾಪ್ತೆ ಮೇಲೆ 18 ವರ್ಷದ ಯುವಕ ಬ್ಲೇಡ್ ನಿಂದ ಹಲ್ಲೆ ನಡೆಸಿದ ಘಟನೆ ರಾಜಸ್ಥಾನ್ ನಲ್ಲಿ ನಡೆದಿದೆ.

ಶಾಲಾ ಆವರಣದಲ್ಲೇ ಈ ಘಟನೆ ನಡೆದಿದೆ. ಕಳೆದ ಕೆಲವು ದಿನಗಳಿಂದ ಯುವಕ ತನ್ನ ಸ್ನೇಹಿತೆಯಾಗುವಂತೆ ಬಾಲಕಿಯ ಹಿಂದೆ ಬಿದ್ದಿದ್ದ ಎನ್ನಲಾಗಿದೆ. ಆದರೆ ಆಕೆ ನಿರಾಕರಿಸಿದ್ದಳು.


ಇದೀಗ ಶಾಲೆಯ ವಿರಾಮದ ವೇಳೆ ಕ್ಲಾಸ್ ನಲ್ಲಿ ಬಾಲಕಿ ಒಬ್ಬಳೇ ಕುಳಿತಿದ್ದಾಗ ಅಲ್ಲಿಗೆ ಬಂದ ಯುವಕ ಆಕೆಯ ಮೇಲೆ ಬ್ಲೇಡ್ ನಿಂದ ಹಲ್ಲೆ ಮಾಡಿ ಗಾಯಗೊಳಿಸಿದ್ದಾನೆ. ಕಿರುಚಾಟ ಕೇಳಿ ಶಿಕ್ಷಕರು ಸ್ಥಳಕ್ಕೆ ಬಂದಾಗ ಬಾಲಕಿ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಆರೋಪಿ ಪರಾರಿಯಾಗಿದ್ದ. ತಕ್ಷಣವೇ ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :