ಐಸಿಸ್ ಉಗ್ರರಿಂದ ಗಂಭೀರ್‌ಗೆ ಕೊಲೆ ಬೆದರಿಕೆ!

ಹೊಸದಿಲ್ಲಿ| Ramya kosira| Last Modified ಬುಧವಾರ, 24 ನವೆಂಬರ್ 2021 (12:38 IST)
ಹೊಸದಿಲ್ಲಿ : ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಹಾಗೂ ಹಾಲಿ ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರಿಗೆ ಐಸಿಸ್ ಕಾಶ್ಮೀರ ಉಗ್ರರಿಂದ ಕೊಲೆ ಬೆದರಿಕೆ ಕರೆ ಬಂದಿದೆ.
ಈ ಹಿನ್ನೆಲೆಯಲ್ಲಿ ಮಾಜಿ ಕ್ರಿಕೆಟಿಗನ ನಿವಾಸಕ್ಕೆ ಹೆಚ್ಚಿನ ಭದ್ರತೆ ನೀಡಲಾಗಿದೆ ಎಂದು ಸೆಂಟ್ರಲ್ ಡಿಸಿಪಿ ಶ್ವೇತಾ ಚೌವ್ಹಾಣ್ ತಿಳಿಸಿದ್ದಾರೆ.
" ಗೌತಮ್ ಗಂಭೀರ್ ಅವರ ಅಧಿಕೃತ ಇ-ಮೇಲ್ ಐಡಿಗೆ ಐಸಿಸಿ ಕಾಶ್ಮೀರದ ಉಗ್ರರು ಕೊಲೆಯ ಬೆದರಿಕೆಯ ಸಂದೇಶ ಕಳುಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಜಿ ಎಡಗೈ ಆಟಗಾರ ನಮಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಹಾಗಾಗಿ ಅವರ ನಿವಾಸದ ಹೊರಗಡೆ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ" ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.
"ನಾವು ನಿಮ್ಮನ್ನು ಹಾಗೂ ನಿಮ್ಮ ಕುಟುಂಬವನ್ನು ಕೊಲ್ಲುತ್ತೇವೆ" ಎಂದು ಐಸಿಸ್ ಕಾಶ್ಮೀರದ ಉಗ್ರರು ಗೌತಮ್ ಗಂಭೀರ್ಗೆ ಈ-ಮೇಲ್ ಕಳುಹಿಸಿದ್ದಾರೆ. ಈ ಪ್ರಕರಣ ಸಂಬಂಧ ಸೈಬರ್ ಸೆಲ್ನಲ್ಲಿ ದೂರು ದಾಖಲಾಗಿದ್ದು, ಐಸಿಸಿ ಕಾಶ್ಮೀರ ಉಗ್ರರ ಇ-ಮೇಲ್ ಐಡಿಯ ಮೂಲವನ್ನು ಪತ್ತೆ ಮಾಡಲು ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ ಎಂದು ದಿಲ್ಲಿ ಪೊಲೀಸ್ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :