ಧೋನಿ ಹುಟ್ಟುಹಬ್ಬ: ಟೀ ಇಂಡಿಯಾ ಆಟಗಾರರ ಸಂಭ್ರಮಾಚರಣೆ ಹೇಗಿತ್ತು ಗೊತ್ತಾ..?

ಜಮೈಕಾ| chandralekha| Last Modified ಶನಿವಾರ, 8 ಜುಲೈ 2017 (13:40 IST)
ಜಮೈಕಾ:ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ 37ನೇ ವಸಂತಕ್ಕೆ ಕಾಲಿಟ್ಟಿದ್ದು, ವೆಸ್ಟ್‌ ಇಂಡೀಸ್‌ನಲ್ಲಿರುವ ಟೀಂ ಇಂಡಿಯಾ ಆಟಗಾರರು ಧೋನಿ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ್ದಾರೆ.
 
ಮುಖಕ್ಕೆ ಸಂಪೂರ್ಣ ಕೇಕ್‌ ಮೆತ್ತಿಕೊಂಡಿರುವ ಮಹೇಂದ್ರ ಸಿಂಗ್ ಧೋನಿ ಜೊತೆಗೆ ವಿವಿಧ ರೀತಿಯಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ತಮ್ಮದೇ ಶೈಲಿಯಲ್ಲಿ ಟೀಂ ಇಡೀಯಾ ಅಟಗಾರರು ಧೋನಿಗೆ ಶುಭಾಷಯಗಳನ್ನು ಕೋರಿದ್ದಾರೆ. 
 ಮಹಿ ಮುಖಕ್ಕೆ ಕೇಕ್ ಮೆತ್ತಿಕೊಂಡು ಜತೆಗೆ ಕೊಹ್ಲಿ ಫೋಟೋ ಕ್ಲಿಕ್ಕಿಸಿಕೊಂಡು ಇನ್‌ಸ್ಟಾಗ್ರಾಮ್‌ಗೆ ಅಪ್‌ಲೋಡ್‌ ಮಾಡಿದ್ದಾರೆ. ಧೋನಿಗೆ ಆಟಗಾರರು ಕೇಕ್‌ ಹಚ್ಚುತ್ತಿರುವ ವಿಡಿಯೋವನ್ನು ಶಿಖರ್‌ ಧವನ್‌ ಶೇರ್‌ ಮಾಡಿದ್ದಾರೆ. ಅದರಂತೆ ಧೋನಿ ಜೊತೆಗೆ ತೆಗೆಸಿಕೊಂಡ ಸೆಲ್ಫಿ ಫೋಟೋ ಶೇರ್‌ ಮಾಡುವ ಮೂಲಕ ಅಜಿಂಕ್ಯಾ ರಹಾನೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಧೋನಿ ಹುಟ್ಟುಹಬ್ಬದ ಜೊತೆಗೆ ವೆಸ್ಟ್‌ ಇಂಡೀಸ್‌ ವಿರುದ್ಧದ ಸರಣಿ ಜಯದ ಸಂಭ್ರಮವೂ ಇದರಲ್ಲಿ ಅಡಗಿರುವುದು ಇನ್ನಷ್ಟು ಸಂಭ್ರಮಕ್ಕೆ ಕಾರಣವಾಗಿದೆ.
 ಇದರಲ್ಲಿ ಇನ್ನಷ್ಟು ಓದಿ :