ಬೆಲ್ಲದ ತುಪ್ಪಾನ್ನದ ರುಚಿ ನಿಮಗೆ ಗೊತ್ತಾ?

ಬೆಂಗಳೂರು| Jagadeesh| Last Modified ಬುಧವಾರ, 3 ಜೂನ್ 2020 (20:29 IST)
ಬೆಲ್ಲದ ತುಪ್ಪಾನ್ನಾದ ರುಚಿ ನೀವು ಮಾಡಬೇಕಾದರೆ ಒಮ್ಮೆ ಮನೆಯಲ್ಲಿ ಟ್ರೈ ಮಾಡಿನೋಡಿ.

ಏನೇನ್ ಬೇಕು?

100 ಗ್ರಾಮ್ ಹೆಸರು ಕಾಳು
ಅರ್ಧ ಕಿಲೋ ಅಕ್ಕಿ
10 ಚಮಚ
ಅಚ್ಚು ಕಾಲು
ಕೊಬ್ಬರಿ ಅರ್ಧ ಗಿಟಕ
ಗೋಡಂಬಿ 50 ಗ್ರಾಮ್
ಏಲಕ್ಕಿ ಪುಡಿ ಅರ್ಧ ಚಮಚ
ಬಾಳೆ ಹಣ್ಣು 2

ಮಾಡೋದು ಹೇಗೆ?: ರಾತ್ರಿ ನೀರಿನಲ್ಲಿ ಹೆಸರು ಕಾಳು ನೆನೆಹಾಕಿ. ಬೆಳಗ್ಗೆ ಅದನ್ನು ಬಸಿ ಹಾಕಿ ಪಾತ್ರೆಯಲ್ಲಿ 5 ತುಪ್ಪ ಚಮಚ ಹಾಕಿ ಅಕ್ಕಿ, ಗೋಡಂಬಿ, ಹೆಸರು ಕಾಳನ್ನು ಹುರಿಯಿರಿ. ಅದಕ್ಕೆ ತಕ್ಕಷ್ಟು ನೀರನ್ನು ಹಾಕಿ ಕಾಲು ಗಂಟೆ ಬೇಯಿಸಬೇಕು. ಅನ್ನಕ್ಕೆ ಬೆಲ್ಲ ಬೆಲ್ಲ, ಕೊಬ್ಬರಿ ತುರಿ, ಬಾಳೆಹಣ್ಣು ಹಾಗೂ ಉಳಿದ ತುಪ್ಪ ಹಾಕಿ ಐದು ನಿಮಿಷ ಬೇಯಿಸಬೇಕು. ಅನ್ನಬೆಂದ ಮೇಲೆ ಏಲಕ್ಕಿಪುಡಿ ಹಾಕಿ ಸೌಟಿನಿಂದ ಮಿಕ್ಸ್ ಮಾಡಿ 2 ನಿಮಿಷಗಳ ನಂತರ ಕೆಳಗಿಳಿಸಬೇಕು.
ಇದರಲ್ಲಿ ಇನ್ನಷ್ಟು ಓದಿ :