ಕೇರಳದಲ್ಲಿ ಮೆಟ್ರೋ ಮ್ಯಾನ್ ಶ್ರೀಧರನ್, ನಟ ಸುರೇಶ್ ಗೋಪಿಗೆ ಮುನ್ನಡೆ

ತಿರುವನಂತಪುರಂ| Krishnaveni K| Last Modified ಭಾನುವಾರ, 2 ಮೇ 2021 (09:52 IST)
ತಿರುವನಂತಪುರಂ: ಕೇರಳ ವಿಧಾನಸಭೆ ಚುನಾವಣೆ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಆಡಳಿತಾರೂಢ ಎಲ್ ಡಿಎಫ್ ಮುನ್ನಡೆಯಲ್ಲಿದೆ.

 
ಇನ್ನು, ಬಿಜೆಪಿಗೆ ಈ ಬಾರಿ ಕೇರಳದಲ್ಲಿ ಭಾರೀ ನಿರೀಕ್ಷೆಯಿತ್ತು. ಅದರಂತೆ ಪಾಲಕ್ಕಾಡ್ ನಿಂದ ಬಿಜೆಪಿ ಪರವಾಗಿ ಕಣಕ್ಕಿಳಿದಿದ್ದ ಮೆಟ್ರೋ ಮ್ಯಾನ್ ಶ್ರೀಧರನ್, ತ್ರಿಶ್ಶೂರ್ ನಲ್ಲಿ ನಟ ಸುರೇಶ್ ಗೋಪಿ ಮುನ್ನಡೆ ಹೊಂದಿದ್ದು, ಪಕ್ಷಕ್ಕೆ ಭರವಸೆ ಮೂಡಿಸಿದ್ದಾರೆ.
 
ಒಟ್ಟಾರೆಯಾಗಿ ಎಲ್ ಡಿಎಫ್ 69 ಸ್ಥಾನಗಳಲ್ಲಿ ಕಾಂಗ್ರೆಸ್ ಮೈತ್ರಿ ಕೂಟ 30 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಸದ್ಯದ ಪರಿಸ್ಥಿತಿ ಗಮನಿಸಿದರೆ ಮತ್ತೆ ಪಿಣರಾಯಿ ವಿಜಯ್ ಅಧಿಕಾರಕ್ಕೆ ಮರಳುವ ಲಕ್ಷಣ ಕಾಣಿಸುತ್ತಿದೆ.
ಇದರಲ್ಲಿ ಇನ್ನಷ್ಟು ಓದಿ :