ಏಕದಿನ ಕ್ರಿಕೆಟ್ ಗೆ ಇಶಾನ್ ಕಿಶನ್, ಸೂರ್ಯಕುಮಾರ್ ಪಾದರ್ಪಣೆ

bengaluru| geethanjali| Last Modified ಭಾನುವಾರ, 18 ಜುಲೈ 2021 (15:52 IST)
ಕೊಲಂಬೊದಲ್ಲಿ ಗುರುವಾರ ನಡೆದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಪಂದ್ಯಕ್ಕೆ ಕೊನೆಯ ಕ್ಷಣ ಇರುವಾಗ ಭಾರತ ಆಡುವ ಅಂತಿಮ 11 ಆಟಗಾರರ ತಂಡ ಪ್ರಕಟಿಸಿತು.
ಶಿಖರ್ ಧವನ್ ನೇತೃತ್ವದ ಭಾರತ ತಂಡದಲ್ಲಿ ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಸೇರ್ಪಡೆಗೊಳ್ಳುವ ಮೂಲಕ ಏಕದಿನ ಕ್ರಿಕೆಟ್ ಗೆ ಒಂದೇ ದಿನ ಪಾದರ್ಪಣೆ ಮಾಡಿದರು. ಇವರಿಬ್ಬರು ಇತ್ತೀಚೆಗಷ್ಟೇ ಟಿ-20 ತಂಡದಲ್ಲೂ ಒಂದೇ ಬಾರಿಗೆ ಪ್ರವೇಶ ಮಾಡಿದ್ದರು.
1990ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಹ್ಯಾಮಿಲ್ಟನ್ ನಲ್ಲಿ ನಡೆದ ಪಂದ್ಯದಲ್ಲಿ ಗುರುಶರಣ ಸಿಂಗ್ ಜನ್ಮದಿನದಂದೇ ಏಕದಿನ ಕ್ರಿಕೆಟ್ ಗೆ ಪಾದರ್ಪಣೆ ಮಾಡಿದ್ದರು. ನಂತರ ಈ ಗೌರವ ಇಶಾನ್ ಕಿಶನ್ ಪಾಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :