Widgets Magazine

ಪದ್ಮ ಪ್ರಶಸ್ತಿಗೆ ಕ್ರೀಡಾ ಸಚಿವಾಲಯ ಶಿಫಾರಸ್ಸು ಮಾಡಿದ 9 ಕ್ರೀಡಾಳುಗಳೂ ಮಹಿಳೆಯರೇ!

ನವದೆಹಲಿ| Krishnaveni K| Last Modified ಗುರುವಾರ, 12 ಸೆಪ್ಟಂಬರ್ 2019 (11:32 IST)
ನವದೆಹಲಿ: ದೇಶದ ಪ್ರತಿಷ್ಠಿತ ಪ್ರಶಸ್ತಿಗಳಲ್ಲೊಂದಾದ ಪದ್ಮ ಪ್ರಶಸ್ತಿಗೆ ಕೇಂದ್ರ ಕ್ರೀಡಾ ಸಚಿವಾಲಯ 9 ಕ್ರೀಡಾಳುಗಳ ಹೆಸರು ಶಿಫಾರಸ್ಸು ಮಾಡಿದ್ದು, ಇವರೆಲ್ಲರೂ ಮಹಿಳೆಯರೇ ಎಂಬುದೇ ಈ ಸಾಲಿನ ವಿಶೇಷ!

 
ಆರು ಬಾರಿ ವಿಶ್ವಚಾಂಪಿಯನ್ ಬಾಕ್ಸರ್ ಮೇರಿ ಕೋಮ್ ಹೆಸರನ್ನು ಪದ್ಮ ವಿಭೂಷಣ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗಿದೆ. ಇದು ದೇಶದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನಕ್ಕಿಂತ ನಂತರದ ಸ್ಥಾನದಲ್ಲಿರುವ ಪ್ರಶಸ್ತಿಯಾಗಿದೆ.
 
ಇನ್ನು ಬ್ಯಾಡ್ಮಿಂಟನ್ ಚಾಂಪಿಯನ್ ಪಿವಿ ಸಿಂಧು ಹೆಸರನ್ನು ಪದ್ಮ ಭೂಷಣ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗಿದೆ. ಇನ್ನು ಉಳಿದಂತೆ ಕುಸ್ತಿ ಪಟು ವಿನೇಶ್ ಪೋಗಟ್, ಕ್ರಿಕೆಟ್ ಆಟಗಾರ್ತಿ ಹರ್ಮನ್ ಪ್ರೀತ್ ಕೌರ್, ಹಾಕಿ ಆಟಗಾರ್ತಿ ರಾಣಿ ರಾಂಪಾಲ್,ಶೂಟರ್ ಸುಮಾ ಶಿರೂರ್, ಟೇಬಲ್ ಟೆನಿಸ್ ತಾರೆ ಮಣಿಕಾ ಬಾತ್ರಾ, ಪರ್ವತಾರೋಹಿಗಳಾದ ತಶಿ ಮತ್ತು ನುಂಗ್ ಶಿ ಮಲಿಕ್ ರನ್ನು ಪದ್ಮ ಶ್ರೀ ಪ್ರಶಸ್ತಿಗೆ ಪರಿಗಣಿಸುವಂತೆ ಕ್ರೀಡಾ ಇಲಾಖೆ ಶಿಫಾರಸ್ಸು ಮಾಡಿದೆ.
ಇದರಲ್ಲಿ ಇನ್ನಷ್ಟು ಓದಿ :