ಟೋಕಿಯೋ: ಪುರುಷರ 65 ಕೆ.ಜಿ. ಫ್ರೀ ಸ್ಟೈಲ್ ಕುಸ್ತಿ ವಿಭಾಗದಲ್ಲಿ ಸೆಮಿಫೈನಲ್ ಗೇರಿದ್ದ ಭಾರತದ ಕುಸ್ತಿಪಟು ಭಜರಂಗ್ ಪೂನಿಯಾ ಸೋಲು ಅನುಭವಿಸಿದ್ದು, ಇನ್ನೀಗ ಕಂಚಿನ ಪದಕಕ್ಕಾಗಿ ಹೋರಾಟ ನಡೆಸಲಿದ್ದಾರೆ. Photo Courtesy: Googleಸೆಮಿಫೈನಲ್ ನಲ್ಲಿ ಇಂದು ಅವರು ಹಾಜಿ ಅಲಿಯೆವ್ ವಿರುದ್ಧ 5-12 ಅಂತರದಿಂದ ಸೋತಿದ್ದಾರೆ. ಇದರೊಂದಿಗೆ ಫೈನಲ್ ಗೇರುವ ಭಜರಂಗ್ ಪೂನಿಯಾ ಕನಸು ಭಗ್ನವಾಗಿದೆ.ಆದರೆ ಈಗಲೂ ಪದಕದ ಆಸೆ ಜೀವಂತವಾಗಿದ್ದು, ಅವರೀಗ ಕಂಚಿನ ಪದಕಕ್ಕಾಗಿ ನಡೆಯಲಿರುವ ಪಂದ್ಯದಲ್ಲಿ ಆಡಬೇಕಿದೆ.