ಯುಎಸ್ ಓಪನ್ ಸೋತ ಜೊಕೊವಿಕ್ ಗೆ ಭಾರೀ ಮೊತ್ತದ ದಂಡದ ಬರೆ

ನ್ಯೂಯಾರ್ಕ್| Krishnaveni K| Last Modified ಮಂಗಳವಾರ, 14 ಸೆಪ್ಟಂಬರ್ 2021 (09:50 IST)
ನ್ಯೂಯಾರ್ಕ್: ಯುಎಸ್ ಓಪನ್ ಫೈನಲ್ ನಲ್ಲಿ ಸೋತು ಐತಿಹಾಸಿಕ ಗೆಲುವು ತಪ್ಪಿಸಿಕೊಂಡ ನಿರಾಸೆಯಲ್ಲಿ ದರ್ವರ್ತನೆ ತೋರಿದ ವಿಶ್ವ ನಂ.1 ಟೆನಿಸಿಗ ನೊವಾಕ್ ಜೊಕೊವಿಕ್ ಗೆ ದಂಡದ ಬರೆ ಹಾಕಲಾಗಿದೆ.
Photo Courtesy: Google

 
ರಷ್ಯಾದ ಮಡ್ವಡೇವ್ ವಿರುದ್ಧ ಫೈನಲ್ ನಲ್ಲಿ 6-4,6-4, 6-4 ಅಂತರದಿಂದ ಸೋತ ಜೊಕೊವಿಕ್ ಹತಾಶೆಯಿಂದ ಬಾಲ್ ಬಾಯ್ ನತ್ತ ರಾಕೆಟ್ ಬೀಸಿದ್ದರು. ಬಳಿಕ ನೆಲಕ್ಕೆ ರಾಕೆಟ್ ಬಡಿದು ಅದನ್ನು ಮುರಿದಿದ್ದರು. ಅವರ ಈ ವರ್ತನೆ ಬಾಲ್ ಬಾಯ್ ಗೆ ಹೆದರಿಕೆ ಹುಟ್ಟಿಸಿತ್ತು.
 
ಈ ಕಾರಣಕ್ಕೆ ಅವರಿಗೆ 5000 ಅಮೆರಿಕನ್ ಡಾಲರ್ ದಂಡ ವಿಧಿಸಲಾಗಿದೆ. ಕಳೆದ ವರ್ಷವೂ ಯುಎಸ್ ಓಪನ್ ಟೂರ್ನಿಯಲ್ಲಿ ದುರ್ವರ್ತನೆಗೆ ಜೊಕೊವಿಕ್ ಗೆ ದಂಡ ವಿಧಿಸಲಾಗಿತ್ತು.
ಇದರಲ್ಲಿ ಇನ್ನಷ್ಟು ಓದಿ :