ಸೈನಾ ನೆಹ್ವಾಲ್ ವಿಶ್ ಮಾಡಿಲ್ವಾ? ಪಿ.ವಿ. ಸಿಂಧು ಹೇಳಿದ್ದು ಕೇಳಿದ್ರೆ ಶಾಕ್!

ನವದೆಹಲಿ| Krishnaveni K| Last Modified ಮಂಗಳವಾರ, 3 ಆಗಸ್ಟ್ 2021 (16:59 IST)
ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧುವಿಗೆ ಕ್ರೀಡಾ ಲೋಕದ ದಿಗ್ಗಜರು, ಅಭಿಮಾನಿಗಳು, ಸೆಲೆಬ್ರಿಟಿಗಳು ಎಲ್ಲರೂ ವಿಶ್ ಮಾಡಿದ್ದಾರೆ. ಆದರೆ ಹಿರಿಯ ತಾರೆ ಸೈನಾ ನೆಹ್ವಾಲ್ ಮಾತ್ರ ಮಾಡಿಲ್ಲ. ಇದರ ಬಗ್ಗೆ ಸಿಂಧು ಮಾಧ‍್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

 
ಮಾಧ್ಯಮ ಸಂದರ್ಶನದಲ್ಲಿ ನಿಮಗೆ ಯಾರೆಲ್ಲಾ ವಿಶ್ ಮಾಡಿದ್ದಾರೆ? ನಿಮಗಿಂತ ಹಿರಿಯ ತಾರೆ ಸೈನಾ ನೆಹ್ವಾಲ್ ಶುಭ ಹಾರೈಸಿದ್ದಾರೆಯೇ ಎಂಬ ಪ್ರಶ್ನೆಗೆ ಸಿಂಧು ಪ್ರತಿಕ್ರಿಯಿಸಿದ್ದಾರೆ.
 
‘ಗೋಪಿ ಸರ್ (ಪುಲ್ಲೇಲ ಗೋಪಿಚಂದ್) ನನಗೆ ಮೆಸೇಜ್ ಮಾಡಿ ಕಂಗ್ರಾಟ್ಸ್ ಎಂದಿದ್ದಾರೆ. ಇನ್ನೂ ಅನೇಕರು ವಿಶ್ ಮಾಡಿದ್ದಾರೆ. ನಾನಿನ್ನೂ ಸೋಷಿಯಲ್ ಮೀಡಿಯಾ ಸರಿಯಾಗಿ ನೋಡಿಲ್ಲ. ಒಂದೊಂದಾಗಿ ಮೆಸೇಜ್ ಗಳನ್ನು ನೋಡುತ್ತಿದ್ದಾನೆ. ಸೈನಾ ನನಗೆ ಮೆಸೇಜ್ ಮಾಡಿಲ್ಲ. ನಾವಿಬ್ಬರೂ ಹೆಚ್ಚು ಮಾತನಾಡಲ್ಲ. ಬಹುಶಃ ಅದಕ್ಕೇ..’ ಎಂದಿದ್ದಾರೆ. ಇಬ್ಬರೂ ತಾರೆಯರ ಶೀತಲ ಸಮರ ಎಲ್ಲರಿಗೂ ಚಿರಪರಿಚಿತವೇ. ಈಗ ಸೈನಾ ಒಲಿಂಪಿಕ್ಸ್ ನಲ್ಲಿ ಉತ್ತಮ ಸಾಧನೆ ತೋರಿದ ಎಲ್ಲಾ ತಾರೆಯರಿಗೆ ಶುಭ ಹಾರೈಸಿದ್ದಾರೆ. ಆದರೆ ಸಿಂಧುವಿಗೆ ಮಾತ್ರ ವಿಶ್ ಮಾಡಿಲ್ಲ. ಆದರೆ ಅವರ ಪತಿ ಕಶ್ಯಪ್ ಮಾತ್ರ ಟ್ವೀಟ್ ಮೂಲಕ ಸಿಂಧುವಿಗೆ ಶುಭ ಹಾರೈಸಿದ್ದರು.
ಇದರಲ್ಲಿ ಇನ್ನಷ್ಟು ಓದಿ :