2021 ರಲ್ಲಿ ನಿವೃತ್ತಿಯ ಸುಳಿವು ನೀಡಿದ ಖ್ಯಾತ ಟೆನಿಸಿಗ ರೋಜರ್ ಫೆಡರರ್

ನವದೆಹಲಿ| Krishnaveni K| Last Modified ಮಂಗಳವಾರ, 15 ಡಿಸೆಂಬರ್ 2020 (09:23 IST)
ನವದೆಹಲಿ: ಕ್ರಿಕೆಟ್ ಗೆ ಸಚಿನ್ ತೆಂಡುಲ್ಕರ್ ನಂತೆ ಟೆನಿಸ್ ಪ್ರಿಯರಿಗೆ ರೋಜರ್ ಫೆಡರರ್ ಎಂದರೆ ಅಷ್ಟೇ ಪ್ರಿಯ. ಆದರೆ ಈಗ ಟೆನಿಸ್ ಅಭಿಮಾನಿಗಳಿಗೆ ನಿರಾಸೆಯ ಸುದ್ದಿಯೊಂದನ್ನು ರೋಜರ್ ಫೆಡರರ್ ನೀಡಿದ್ದಾರೆ.

 
ಸ್ವಿಜರ್ ಲ್ಯಾಂಡ್‍ ನಲ್ಲಿ ಕ್ರೀಡಾ ಪ್ರಶಸ್ತಿ ಪ್ರಧಾನ ಸಮಾರಂಭವೊಂದರಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡುವ ವೇಳೆ ರೋಜರ್ ನಿವೃತ್ತಿಯ ಸುಳಿವು ನೀಡಿದ್ದಾರೆ. 2021 ರಲ್ಲಿ ಬಹುಶಃ ನಾನು ಅಂಕಣಕ್ಕೆ ಮರಳಲಾರೆ ಎಂದಿರುವ ರೋಜರ್ ನಿವೃತ್ತಿಯ ಬಗ್ಗೆ ಸುಳಿವು ನೀಡಿದ್ದಾರೆ. 2020 ರಲ್ಲಿ ಆಸ್ಟ್ರೇಲಿಯಾ ಓಪನ್ ಸೆಮಿಫೈನಲ್ ನಲ್ಲಿ ಆಡಿದ್ದೇ ಅವರ ಕೊನೆಯ ಆಟವಾಗಿದೆ.
ಇದರಲ್ಲಿ ಇನ್ನಷ್ಟು ಓದಿ :