ಗಂಡು ಮಗುವಿಗೆ ಅಮ್ಮನಾದ ಟೆನಿಸ್ ತಾರೆ ಸಾನಿಯಾ ಮಿರ್ಜಾ

ಹೈದರಾಬಾದ್, ಮಂಗಳವಾರ, 30 ಅಕ್ಟೋಬರ್ 2018 (10:15 IST)

ಹೈದರಾಬಾದ್: ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಗಂಡು ಮಗುವಿಗೆ ಜನ್ಮವಿತ್ತಿದ್ದಾರೆ. ಈ ವಿಚಾರವನ್ನು ಪತಿ ಶೊಯೇಬ್ ಮಲಿಕ್ ಟ್ವಿಟರ್ ಮೂಲಕ ಈ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.
 
ಇಂದು ಬೆಳ್ಳಂ ಬೆಳಿಗ್ಗೆಯೇ ಶುಭ ಸುದ್ದಿಯನ್ನು ಹೊರಹಾಕಿರುವ ಶೊಯೇಬ್ ‘ಇದನ್ನು ಹೇಳಲು ನನಗೆ ತುಂಬಾ ಸಂತೋಷವಾಗುತ್ತಿದೆ. ನಮಗೆ ಗಂಡು ಮಗುವಾಗಿದೆ. ನನ್ನ ಪತ್ನಿ ಯಾವತ್ತಿನ ಹಾಗೇ ಸ್ಟ್ರಾಂಗ್ ಆಗಿ, ಆರೋಗ್ಯವಾಗಿದ್ದಾಳೆ’ ಎಂದು ಶೊಯೇಬ್ ಟ್ವೀಟ್ ಮಾಡಿದ್ದಾರೆ.
 
ಇತ್ತ ಶೊಯೇಬ್ ಮ್ಯಾನೇಜರ್ ಕೂಡಾ ಈ ವಿಚಾರವನ್ನು ಟ್ವೀಟ್ ಮಾಡಿದ್ದು, ‘ಗಂಡು ಮಗುವಾಗಿದೆ, ಅಪ್ಪ-ಅಮ್ಮ ಇಬ್ಬರ ಮೊಗದಲ್ಲೂ ನಗು ತುಂಬಿದೆ, ಅಪ್ಪನಂತೂ ಭೂಮಿ ಮೇಲೆಯೇ ಇಲ್ಲ’ ಎಂದು ಖುಷಿಯಿಂದಲೇ ಬರೆದುಕೊಂಡಿದ್ದಾರೆ. ಇದೀಗ ಸೆಲೆಬ್ರಿಟಿಗಳು, ಅಭಿಮಾನಿಗಳು ಸಾನಿಯಾ ದಂಪತಿಗೆ ಶುಭಕೋರುತ್ತಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ತಂಡದಿಂದ ಕೊಕ್ ನೀಡುವ ಬಗ್ಗೆ ಧೋನಿ ಪ್ರತಿಕ್ರಿಯೆ ಏನಿತ್ತು ಗೊತ್ತಾ?

ಮುಂಬೈ: ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾದಿಂದ ಕೈಬಿಡುವ ಬಗ್ಗೆ ...

news

ಸಚಿನ್-ಸೆಹ್ವಾಗ್ ದಾಖಲೆ ಮುರಿದ ರೋಹಿತ್-ಧವನ್ ಜೋಡಿ

ಮುಂಬೈ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕರಾದ ...

news

ಬ್ಯಾಟಿಂಗ್ ನಲ್ಲಿ ವಿಶ್ವದಾಖಲೆ ಮಾಡಿದ ಬಳಿಕ ಫೀಲ್ಡಿಂಗ್ ನಲ್ಲೂ ಹೀರೋ ಆದ ರೋಹಿತ್ ಶರ್ಮಾ

ಮುಂಬೈ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ನಾಲ್ಕನೇ ಏಕದಿನ ಪಂದ್ಯವನ್ನು ಟೀಂ ಇಂಡಿಯಾ 224 ರನ್ ಗಳ ...

news

ಭಾರತ-ವೆಸ್ಟ್ ಇಂಡೀಸ್ ಏಕದಿನ: ಕೊಹ್ಲಿ ಸ್ಟೈಲಲ್ಲಿ ಶತಕ ಸಂಭ್ರಮಾಚರಣೆ ಮಾಡಿದ ರೋಹಿತ್ ಶರ್ಮಾ!

ಮುಂಬೈ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿರುವ ನಾಲ್ಕನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ...