ಕೊನೆಗೂ ಸಾನಿಯಾ ಮಿರ್ಜಾ ಪುತ್ರ ಇಝಾನ್ ನ ಮುಖದರ್ಶನ! ಟೆನಿಸ್ ಬೆಡಗಿಯ ಪುತ್ರ ಪಕ್ಕಾ ಮುದ್ದು ಗೊಂಬೆ!

ಹೈದರಾಬಾದ್, ಮಂಗಳವಾರ, 25 ಡಿಸೆಂಬರ್ 2018 (09:14 IST)

ಹೈದರಾಬಾದ್: ಸಾನಿಯಾ ಮಿರ್ಜಾ ಮತ್ತು ಶೊಯೇಬ್ ಮಲಿಕ್ ದಂಪತಿ ಇತ್ತೀಚೆಗಷ್ಟೇ ಗಂಡು ಮಗುವಿಗೆ ಜನ್ಮವಿತ್ತಿದ್ದಾರೆ. ಆದರೆ ಟೆನಿಸ್ ಬೆಡಗಿಯ ಪುತ್ರ ಯಾರ ಹಾಗಿರಬಹುದು, ಹೇಗಿರಬಹುದು ಎಂದು ಅಭಿಮಾನಿಗಳಿಗೆ ಭಾರೀ ಕುತೂಹಲವಿತ್ತು.
 
ಆ ಕುತೂಹಲಕ್ಕೆ ಇದೀಗ ಸಾನಿಯಾ-ಶೊಯೇಬ್ ದಂಪತಿ ತೆರೆ ಎಳೆದಿದ್ದಾರೆ. ಸಾನಿಯಾ ಮೊನ್ನೆಯಷ್ಟೇ ಪುತ್ರನೊಂದಿಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಾಗ ಕ್ಯಾಮರಾ ಕಣ್ಣುಗಳು ಬೇಬಿ ಇಝಾನ್ ಫೋಟೋ ತೆಗೆಯಲು ಹರಸಾಹಸಪಟ್ಟಿದ್ದವು. ಆದರೆ ಸಾನಿಯಾ ಯಾರಿಗೂ ಮಗುವಿನ ಮುಖ ಕಾಣದಂತೆ ಕವರ್ ಮಾಡಿದ್ದರು.
 

ಆದರೆ ಇದೀಗ ಸಾನಿಯಾ ಹಾಗೂ ಶೊಯೇಬ್ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಮಗುವಿನ ಫೋಟೋ ಹಾಕಿದ್ದು, ಸೆಲೆಬ್ರಿಟಿಗಳು, ಅಭಿಮಾನಿಗಳು ಸೇರಿದಂತೆ ಸಾವಿರಾರು ಮಂದಿ ಲೈಕ್ ಮಾಡಿದ್ದಾರೆ.
 
ಥೇಟ್ ಸಾನಿಯಾರನ್ನೇ ಹೋಲುವ ಗುಂಡು ಗುಂಡಗಿನ ಮಗುವಿನ ಫೋಟೋ ನೋಡಿ ಪ್ರಿಯಾಂಕ ಚೋಪ್ರಾ, ನೇಹಾ ದುಪಿಯಾ ಸೇರಿದಂತೆ ಸೆಲೆಬ್ರಿಟಿಗಳು ಎಷ್ಟು ಮುದ್ದಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಅಭಿಮಾನಿಗಳೂ ಈಗ ಅದನ್ನೇ ಹೇಳುತ್ತಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಜೀರೊ ನೋಡಿ ಅನುಷ್ಕಾಳನ್ನು ಸುಮ್ ಸುಮ್ನೇ ಹೊಗಳಿದ ವಿರಾಟ್ ಕೊಹ್ಲಿಗೆ ಕೆಜಿಎಫ್ ನೋಡೋ ಎಂದ ಟ್ರೋಲಿಗರು!

ಮೆಲ್ಬೋರ್ನ್: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ...

news

ಕೊನೆಗೂ ಧೋನಿಗೆ ತೆರೆಯಿತು ಅವಕಾಶದ ಬಾಗಿಲು

ಮುಂಬೈ: ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ ಮತ್ತು ಆಸ್ಟ್ರೇಲಿಯಾ ಒಳಗೊಂಡ ತ್ರಿಕೋನ ಏಕದಿನ ಸರಣಿಗೆ ಇಂದು ...

news

ಶಿಷ್ಯನ ಮದುವೆ ರಂಗು ಹೆಚ್ಚಿಸಿದ ರಾಹುಲ್ ದ್ರಾವಿಡ್

ತಿರುವನಂತಪುರಂ: ತಮ್ಮ ಬಹುಕಾಲದ ಗೆಳತಿ ಚಾರುಲತಾ ಜತೆಗೆ ಸಪ್ತಪದಿ ತುಳಿದ ಭಾರತ ಎ ತಂಡದ ವಿಕೆಟ್ ಕೀಪರ್ ...

news

ವಿರಾಟ್ ಕೊಹ್ಲಿ ಬಗ್ಗೆ ಅನಿಲ್ ಕುಂಬ್ಳೆ ಹೇಳಿದ್ದು ಕೇಳಿ ಫುಲ್ ಶಾಕ್ ಆದ ಕ್ರಿಕೆಟ್ ಲೋಕ!

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನಿಲ್ ಕುಂಬ್ಳೆ ಸಂಬಂಧ ಹೇಗಿತ್ತು ಎಂಬುದು ಎಲ್ಲರಿಗೂ ...