ಹೈದರಾಬಾದ್: ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಟೆನಿಸ್ ತಾರೆ ಸಾನಿಯಾ ಮಿರ್ಜಾ ತಮ್ಮ ಪತಿ, ಪಾಕ್ ಕ್ರಿಕೆಟಿಗ ಶೊಯೇಬ್ ಮಲಿಕ್ ರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ. ಹಾಗಂತ ಅವರೇ ಸೋಷಿಯಲ್ ಮೀಡಿಯಾದಲ್ಲಿ ರೊಮ್ಯಾಂಟಿಕ್ ಆಗಿ ಬರೆದುಕೊಂಡಿದ್ದಾರೆ.ಇತ್ತೀಚೆಗಷ್ಟೇ ತವರಿನಲ್ಲಿ ಸೀಮಂತ ಶಾಸ್ತ್ರ ಮಾಡಿದಾಗಲೂ ಪತಿ ಶೊಯೇಬ್ ಇಲ್ಲವೆಂದು ಸಾನಿಯಾ ಬೇಜಾರು ಮಾಡಿಕೊಂಡು ಟ್ವೀಟ್ ಮಾಡಿದ್ದರು. ಇದೀಗ ಮತ್ತೆ ಏಷ್ಯಾ ಕಪ್ ಆಡಲು ಪಾಕಿಸ್ತಾನ ಕ್ರಿಕೆಟ್ ತಂಡದೊಂದಿಗೆ ದುಬೈನಲ್ಲಿರುವ ಶೊಯೇಬ್ ಮಲಿಕ್ ರನ್ನು ಸಾನಿಯಾ