ಲಾಕ್ ಡೌನ್ ವೇಳೆ ಸಾನಿಯಾ ಮಿರ್ಜಾಗೆ ಸಿಕ್ಕ ಹೊಸ ಪಾರ್ಟನರ್ ಯಾರು ಗೊತ್ತಾ?

ಹೈದರಾಬಾದ್| Krishnaveni K| Last Modified ಗುರುವಾರ, 9 ಏಪ್ರಿಲ್ 2020 (09:18 IST)
ಹೈದರಾಬಾದ್: ಲಾಕ್ ಡೌನ್ ನಿಂದಾಗಿ ಕ್ರೀಡಾಳುಗಳಿಗೆ ಅಭ್ಯಾಸ ನಡೆಸಲೂ ಸಾಧ‍್ಯವಾಗುತ್ತಿಲ್ಲ. ಇದೀಗ ಭಾರತದ ಖ್ಯಾತ ಟೆನಿಸ್ ತಾರೆ ತಮ್ಮ ಹೊಸ ಟೆನಿಸ್ ಪಾರ್ಟನರ್ ಯಾರು ಎಂದು ಬಹಿರಂಗಪಡಿಸಿದ್ದಾರೆ.
 

ಲಾಕ್ ಡೌನ್ ವೇಳೆ ಮನೆಯಲ್ಲೇ ಟೆನಿಸ್ ಅಭ್ಯಾಸ ನಡೆಸುತ್ತಿರುವ ಸಾನಿಯಾಗೆ ಪುತ್ರ ಇಝಾನ್ ಜೊತೆಯಾಗುತ್ತಿದ್ದಾನಂತೆ. ಇಝಾನ್ ಟೆನಿಸ್ ರಾಕೆಟ್ ಹಿಡಿದಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಸಾನಿಯಾ ಲಾಕ್ ಡೌನ್ ನಲ್ಲಿ ತಮಗೆ ಪುತ್ರನೇ ಜೊತೆಗಾರ ಎಂದು ಸಾರಿದ್ದಾರೆ.
 
ಇದಕ್ಕೆ ಸಾವಿರಾರು ಜನರು ಕಾಮೆಂಟ್ ಮಾಡಿದ್ದು, ಮುಂಬರುವ ಕ್ರಿಕೆಟ್ ಕಮ್ ಟೆನಿಸ್ ಆಟಗಾರ ಎಂದು ತಮಾಷೆ ಮಾಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :