Widgets Magazine

ಪಾಕ್ ಗೆ ಜೈ ಎಂದ ಶೊಯೇಬ್ ಮಲಿಕ್, ಭಾರತೀಯ ಹೀರೋನನ್ನು ಅಭಿನಂದಿಸಿದ ಸಾನಿಯಾ ಮಿರ್ಜಾ!

ಹೈದರಾಬಾದ್| Krishnaveni K| Last Modified ಭಾನುವಾರ, 3 ಮಾರ್ಚ್ 2019 (09:39 IST)
ಹೈದರಾಬಾದ್: ಭಾರತ ಮತ್ತು ಪಾಕಿಸ್ತಾನ ನಡುವೆ ಇದೀಗ ಯುದ್ಧ ಸದೃಶ ವಾತಾವರಣವಿದೆ. ಅಂತಹ ಸಂದರ್ಭದಲ್ಲಿ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ತಮ್ಮ ದೇಶ ಭಾರತವನ್ನು ಸಮರ್ಥಿಸಿಕೊಂಡರೆ, ಅತ್ತ ಅವರ ಪತಿ ಶೊಯೇಬ್ ಮಲಿಕ್ ಪಾಕಿಸ್ತಾನ ಪರವಾಗಿ ನಿಂತಿದ್ದಾರೆ.
 
ವಿಂಗ್ ಕಮಾಂಡರ್ ಅಭಿನಂದನ್ ಜೈನ್ ಬಿಡುಗಡೆ ವಿಚಾರ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಘೋಷಿಸುತ್ತಿದ್ದಂತೆ ಶೊಯೇಬ್ ಮಲಿಕ್ ‘ಹಮಾರಾ ಪಾಕಿಸ್ತಾನ್ ಜಿಂದಾಬಾದ್’ ಎಂದಿದ್ದರು.
 
ಇದೀಗ ಅಭಿನಂದನ್ ತಾಯ್ನಾಡಿಗೆ ಮರಳಿದ ಬಳಿಕ ಸಾನಿಯಾ ಮಿರ್ಜಾ ಟ್ವೀಟ್‍ ಮಾಡಿದ್ದು, ‘ವಿಂಗ್ ಕಮಾಂಡರ್ ಅಭಿನಂದನ್ ನಿಮಗೆ ಸ್ವಾಗತ. ನೀವು ನಿಜವಾದ ಹೀರೋ. ನಿಮ್ಮ ಧೈರ್ಯ, ಸಾಹಸಕ್ಕೆ ದೇಶವೇ ಸೆಲ್ಯೂಟ್ ಮಾಡುತ್ತದೆ’ ಎಂದು ಸಾನಿಯಾ ಟ್ವೀಟ್ ಮಾಡಿದ್ದರು.
 
ಇದಕ್ಕೆ ಪಾಕಿಸ್ತಾನಿಯರೂ ಕಾಮೆಂಟ್ ಮಾಡಿದ್ದು, ಯಾವ ಲೆಕ್ಕದಲ್ಲಿ ಹೀರೋ? ಸಿಕ್ಕಿಬಿದ್ದಿದ್ದಕ್ಕಾ ಎಂದು ಲೇವಡಿ ಮಾಡಿದ್ದಾರೆ. ಆದರೆ ಪಾಕ್ ಸಮರ್ಥರಿಗೆ ತಿರುಗೇಟು ಕೊಟ್ಟಿರುವ ಭಾರತೀಯರು ನೀವು ಏನೇ ಹೇಳಿದ್ರೂ ನಿಮ್ಮ ಸುಳ್ಳುಗಳು ಸತ್ಯವಾಗಲ್ಲ. ಸಾನಿಯಾ ಎಲ್ಲಾ ಭಾರತೀಯರ ಭಾವನೆಗಳನ್ನೇ ಹೊರಹಾಕಿದ್ದಾರೆ ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
ಇದರಲ್ಲಿ ಇನ್ನಷ್ಟು ಓದಿ :