Widgets Magazine

ಟೀಂ ಇಂಡಿಯಾಕ್ಕೆ ಅಭಿನಂದಿಸಿದರೂ ಟ್ರೋಲ್ ಗೊಳಗಾದ ಸಾನಿಯಾ ಮಿರ್ಜಾ

ಹೈದರಾಬಾದ್| Krishnaveni K| Last Modified ಶುಕ್ರವಾರ, 7 ಜೂನ್ 2019 (09:40 IST)
ಹೈದರಾಬಾದ್: ಪಾಕಿಸ್ತಾನ ಕ್ರಿಕೆಟಿಗ ಶೊಯೇಬ್ ಮಲಿಕ್ ರನ್ನು ಮದುವೆಯಾದಾಗಿನಿಂದ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಭಾರತ-ಪಾಕ್ ವಿಚಾರಕ್ಕೆ ಟ್ರೋಲ್ ಗೊಳಗಾಗುತ್ತಲೇ ಇರುತ್ತಾರೆ.
 

ಮೊನ್ನೆ ಪಾಕಿಸ್ತಾನ ತಂಡ ಇಂಗ್ಲೆಂಡ್ ವಿರುದ್ಧ ವಿಶ್ವಕಪ್ ನಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಕ್ಕೆ ಸಾನಿಯಾ ವಿಶ್ ಮಾಡಿ ಟ್ರೋಲ್ ಗೊಳಗಾಗಿದ್ದರು. ಇದೀಗ ನಿನ್ನೆ ಟೀಂ ಇಂಡಿಯಾ ಗೆಲುವಿಗೆ ಅಭಿನಂದಿಸಿದ್ದಕ್ಕೂ ಟ್ರೋಲ್ ಗೊಳಗಾಗಿದ್ದಾರೆ.
 
ಪಾಕ್ ಗೆದ್ದಾಗ ಬೆಳಗಿನ ಜಾವ ಮೂರು ಗಂಟೆಗೆ ವಿಶ್ ಮಾಡಿದ್ದ ಸಾನಿಯಾ ಭಾರತ ಮೊನ್ನೆಯೇ ಪಂದ್ಯ ಗೆದ್ದರೂ ನಿನ್ನೆ ಸಂಜೆ ವೇಳೆಗೆ ತಮ್ಮ ಟ್ವಿಟರ್ ಖಾತೆಯಲ್ಲಿ ವಿಶ್ ಮಾಡಿದ್ದಕ್ಕೆ ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ. ಅಲ್ಲದೆ ಕೆಲವರು ನೋಡು ನಿನ್ನ ಗಂಡನ ಪಾಕ್ ತಂಡವನ್ನು ನಾವು ಸೋಲಿಸುತ್ತೇವೆ ಕಾಯ್ತಿರು ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :