Widgets Magazine

ಪಾಕ್ ಸೋಲಿನ ಬಗ್ಗೆ ನಟಿ ವೀಣಾ ಮಲಿಕ್ ಜತೆ ಟ್ವಿಟರ್ ನಲ್ಲೇ ಕಿತ್ತಾಡಿದ ಸಾನಿಯಾ ಮಿರ್ಜಾ

ಹೈದರಾಬಾದ್| Krishnaveni K| Last Modified ಬುಧವಾರ, 19 ಜೂನ್ 2019 (10:51 IST)
ಹೈದರಾಬಾದ್: ಪಾಕಿಸ್ತಾನ ಕ್ರಿಕೆಟ್ ತಂಡ ವಿಶ್ವಕಪ್ ನಲ್ಲಿ ಭಾರತದ ಎದುರು ಸೋತ ಬಗ್ಗೆ ಇದೀಗ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕ್ ನಟಿ ವೀಣಾ ಮಲಿಕ್ ಟ್ವಿಟರ್ ನಲ್ಲೇ ಕಿತ್ತಾಡಿಕೊಂಡಿದ್ದಾರೆ.

 
ಭಾರತದ ವಿರುದ್ಧದ ಪಂದ್ಯಕ್ಕೆ ಮೊದಲು ಪತಿ ಶೊಯೇಬ್ ಮಲಿಕ್ ಹಾಗೂ ಇತರ ಪಾಕ್ ಕ್ರಿಕೆಟಿಗರ ಜತೆ ಸಾನಿಯಾ ಬರ್ಗರ್ ಪಾರ್ಟಿ ಮಾಡಿದ್ದು ಭಾರೀ ಸುದ್ದಿಯಾಗಿತ್ತು. ಮಹತ್ವದ ಪಂದ್ಯಕ್ಕೆ ಮೊದಲು ಫಿಟ್ ನೆಸ್ ಬಗ್ಗೆ ಗಮನಕೊಡದೇ ಪಾಕ್ ಕ್ರಿಕೆಟಿಗರು ಬರ್ಗರ್ ಸೇವಿಸಿದ್ದಕ್ಕೆ ಟೀಕೆಗೊಳಗಾಗಿದ್ದರು.
 
ಇದೀಗ ಇದೇ ವಿಚಾರವನ್ನು ಹಿಡಿದು ಪಾಕ್ ನಟಿ ವೀಣಾ ಮಲಿಕ್ ಸಾನಿಯಾರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ‘ಸಾನಿಯಾ ನನಗೆ ನಿನ್ನ ಮಗುವಿನ ಬಗ್ಗೆ ಚಿಂತೆಯಾಗುತ್ತಿದೆ. ಅವನನ್ನು ನೀವು ಬರ್ಗರ್ ಪಾಯಿಂಟ್ ಗೆ ಕರೆದೊಯ್ದಿದ್ದು ಸರಿಯೇ? ನನಗೆ ತಿಳಿದ ಮಟ್ಟಿಗೆ ಈ ಜಂಕ್ ಫುಡ್ ಮಕ್ಕಳಿಗೆ, ಕ್ರೀಡಾಪಟುಗಳಿಗೆ ಒಳ್ಳೆಯದಲ್ಲ. ನೀವು ಒಬ್ಬ ತಾಯಿಯಾಗಿ ಮತ್ತು ಅಥ್ಲೆಟ್ ಆಗಿ ಇದನ್ನು ತಿಳಿದಿರಬೇಕು’ ಎಂದು ಟೀಕಿಸಿದ್ದರು.
 
ಇದಕ್ಕೆ ತಿರುಗೇಟು ನೀಡಿರುವ ಸಾನಿಯಾ ‘ನಾನು ನನ್ನ ಮಗುವನ್ನು ಬರ್ಗರ್ ಪಾಯಿಂಟ್ ಗೆ ಕರೆದೊಯ್ದಿರಲಿಲ್ಲ. ಒಂದು ವೇಳೆ ಹೋಗಿದ್ದರೂ ಅದು ನಿಮಗೂ, ಜಗತ್ತಿನ ಇತರರಿಗೂ ಇದು ಅನಗತ್ಯ. ಎಲ್ಲರಿಗಿಂತ ಹೆಚ್ಚು ನಾನು ನನ್ನ ಮಗನ ಬಗ್ಗೆ ಕಾಳಜಿವಹಿಸುತ್ತೇನೆ. ಎರಡನೆಯದಾಗಿ ನಾನು ಪಾಕಿಸ್ತಾನ ತಂಡದ ಡಯಟಿಷಿಯನ್ ಅಥವಾ ಅವರ ಅಮ್ಮನೋ, ಶಿಕ್ಷಕಿಯೋ, ಪ್ರಿನ್ಸಿಪಾಲ್ ಅಲ್ಲ’ ಎಂದಿದ್ದಾರೆ. ಈ ಮೂಲಕ ಇಬ್ಬರ ಕಿತ್ತಾಟ ಬಹಿರಂಗವಾಗಿದೆ.
ಇದರಲ್ಲಿ ಇನ್ನಷ್ಟು ಓದಿ :